ಚಳ್ಳಕೆರೆ : ಹಿಂದೂ ಮುಸ್ಲಿಂ ಸ್ನೇಹ ಸಂಕೇತವಾದ ಮೊಹರಂ ಹಬ್ಬ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು‌ ಜರುಗದಂತೆ ಗ್ರಾಮಸ್ಥರೆ ನೋಡಿಕೊಳ್ಳಬೇಕು ಎಂದು ಚಳ್ಳಕೆರೆ ಪೊಲೀಸ್ ಠಾಣೆಯ ಪಿಐ ಕೆ.ಕುಮಾರ್ ಹೇಳಿದರು.

ಅವರು ನಗರದ ಪೊಲೀಸ್ ಠಾಣೆಯ ಲ್ಲಿ ನಡೆದ ಮೊಹರಂ ಹಬ್ಬದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಹಬ್ಬದ ಸಂಧರ್ಭದಲ್ಲಿ ಗ್ರಾಮದ ಎಲ್ಲಾ ವರ್ಗದ ಜನರು ಸಾಮರಸ್ಯದಿಂದ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಬೇಕು, ಕೆಂಡ ಹಾಯುವ ಸಂಧರ್ಭದಲ್ಲಿ ಬ್ಯಾರಿಕೆಡ್ ಅಳವಡಿಸಿಕೊಂಡು ರಕ್ಷಣೆ ಮೂಲಕ ಅಲಾಯಿ ಕುಣಿ ಹತ್ತಿರ ಯಜಮಾನರು ಇರಬೇಕು ಕೇವಲ ಪೋಲೀಸ್ ರಿಂದ ಗ್ರಾಮದಲ್ಲಿ ಶಾಂತಿ ಕಾಪಾಡಲು ಹೋಗುವುದಿಲ್ಲ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.

ಇದೇ ಸಂಧರ್ಭದಲ್ಲಿ ಪಿಎಸ್ಐ ಶಿವರಾಜ್, ಪಿಎಸ್ಐ ದರೇಪ್ಪ ಬಾಳಪ್ಪ ದೊಡ್ಡಮನಿ, ಈರೇಶ್ ಇತರ ಸಿಬ್ಬಂದಿ ವರ್ಗ ಸಾರ್ವಜನಿಕರು ಹಾಜರಿದ್ದರು.

About The Author

Namma Challakere Local News
error: Content is protected !!