ಚಳ್ಳಕೆರೆ:ಜ.10 :ವಿದ್ಯಾರ್ಥಿಗಳಿಗೆ ಸಂತೆ ಮೇಳಾ ನಡೆಸುವುದು ಅವರ ವ್ಯವಹಾರ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಹೆಚ್ಚಿಸಲು ಅತ್ಯಂತ ಉಪಯುಕ್ತವಾಗಿದೆ .ಈ ಚಟುವಟಿಕೆ ಮಕ್ಕಳಿಗೆ ನೈಜ ಜೀವನದ ಅನೇಕ ಪಾಠಗಳನ್ನು ಕಲಿಸುತ್ತದೆ ಎಂದು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಸಿಮ್ ಉನ್ನಿಸಾ ಹೇಳಿದರು.
ನಗರದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವ್ಯವಹಾರ ಜ್ಞಾನಾಭಿವೃದ್ದಿಗೆ ಸಂತೆ ಮೇಳಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಈ ಕಾರ್ಯಕ್ರಮದಲ್ಲಿ
ಅವರು ಮಾತನಾಡಿ, ಸಂತೆ ಮೇಳ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ಬೆಲೆ ನಿಗದಿ ಮತ್ತು ಗ್ರಾಹಕರಿಗೆ ಸರಿಯಾದ ಸೇವೆಯನ್ನು ನೀಡುವ ಕುರಿತಂತೆ ಅರಿವು ಪಡೆಯುತ್ತಾರೆ ಮತ್ತು ಲಾಭ ನಷ್ಟದ ಗಣನೆ ಮತ್ತು ಹಣಕಾಸಿನ ನಿರ್ವಹಣೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಮೇಳದಲ್ಲಿ ಬರುವ ಅತಿಥಿಗಳ ಪ್ರಶ್ನೆಗಳಿಗೆ ಉತ್ತರಿಸುವುದು ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ತಕ್ಷಣದ ನಿರ್ಬಂಧಗಳನ್ನು ಕೈಗೊಳ್ಳುವುದು ಇದರಲ್ಲಿ ಮುಖ್ಯ ಕಲಿಕೆ ಯಾಗಿದೆ. ಮತ್ತೆ ತಮ್ಮ ಅಂಗಡಿಗಳನ್ನು ಆಕರ್ಷಕವಾಗಿ ಅಲಂಕರಿಸುವುದು ಉತ್ಪನ್ನ ಪ್ರಚಾರದ ಹೊಸ ಮಾರ್ಗಗಳನ್ನು ಪ್ರಯೋಗಿಸುವುದು ಮತ್ತು ಗ್ರಾಹಕರ ಗಮನ ಸೆಳೆಯುವ ಮಾರ್ಗಗಳನ್ನ ಮಕ್ಕಳು ಕಲಿಯುತ್ತಾರೆ.. ಮತ್ತು ಸಹಕಾರ ಕೌಸಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ ಈ ಮೇಳಾದಲ್ಲಿ ವಿವಿಧ ಜನರೊಂದಿಗೆ ಸಂವಾದ ನಡೆಸುವುದರಿಂದ ಸಾಮಾಜಿಕ ಕೌಸಲ್ಯಗಳು ಹೆಚ್ಚುತ್ತದೆ ,ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದರ ಬೇಡಿಕೆಗೆ ಸ್ಪಂದಿಸುವುದು, ಮಾರಾಟ ವಸ್ತುಗಳಿ ಹೇಗೆ ತಾಯಾರಾಗುತ್ರವೆ ಮತ್ತು ಅವುಗಳ ಗುಣಮಟ್ಟ ಹಾಗೆ ಬೆಲೆ ನಿಗದಿ ಕುರಿತು ತಿಳಿಯಲಾಗುತ್ತದೆ.ಮಕ್ಕಳಿಗೆ ಆಟ ಪಾಠ ಸಂಗೀತ ಜತಗೆ ಇಂತಹ ಇಂತಹ ಮೇಳಗಳು ಉಪಯೋಗವಾಗಲಿ ಎಂದರು..
ಶಿಕ್ಷಕರಾದ ಶ್ರೀಧರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂವಹನ ಸಹಕಾರಕ್ಕಾಗಿ ಸಂತೆ ಮೇಳ ಮೇಳವನ್ನು ಆಯೋಜನೆ ಮಾಡಲಾಗಿದೆ. ಈ ಮೇಳಕ್ಕೆ ಪೋಷಕರು ಹಾಗೂ ಶಾಲಾ ಸಮಿತಿ ಸದಸ್ಯರು ಉತ್ತಮ ಸಹಕಾರ ನೀಡಿದ್ದಾರೆ ಎಂದರು….
ಈ ಮೇಳದಲ್ಲಿ ವಿದ್ಯಾರ್ಥಿಗಳು ಸೊಪ್ಪು, ತರಕಾರಿ, ತಿಂಡಿ, ಪಾನಿಪೂರಿ, ತೆಂಗಿನಕಾಯಿ ಸೇರಿದಂತೆ ವಿವಿಧ ರೀತಿಯ ವಸ್ತುಗಅಭಿವೃದ್ಧಿಪಡಿಸಿಕೊಳ್ಳುತ್ತಾರೆ,ಳದಲ್ಲಿ ಶಿಕ್ಷಕರಾದ ಗುಲ್ಜರ್ ಭಾನು ಉಮಯ್ ಸಲ್ಮಾ ನಾಗಮಣಿ, ಶ್ರೀಧರ್ ವಿದ್ಯಾರ್ಥಿಗಳು ಹಾಗೂ ಎಸ್ ಟಿ ಎಂ ಸಿ ಉಪಾಧ್ಯಕ್ಷರಾದ ಖದೀರ್.
ಸದಸ್ಯರಾದ ಮುಜಿಬ್ ಹಾಗೂ ವಿದ್ಯಾರ್ಥಿಗಳು ಪೋಷಕರು ಇದ್ದರು..

