ಚಿತ್ರದುರ್ಗ : ಜಿಲ್ಲೆಯ NCC ವಿಧ್ಯಾರ್ಥಿ 2026 ಜನವರಿ 26 ಗಣರಾಜ್ಯೋತ್ಸವ ಪಂಥ ಸಂಚಲನ ಕ್ಕೆ ಆಯ್ಕೆ,

ತೇಜ.ಕೆ. ಅಂತಿಮ ಬಿ.ಎ. HPPC ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ಇಲ್ಲಿ ವ್ಯಾಸಂಗ ಮಾಡುತ್ತಿದ್ದು,ಮೂಲತಃ ಬಿ.ಜೆ.ಕೆರೆ ಗ್ರಾಮದ ಕರಿಬಸಪ್ಪ.ಎನ್.ಎಸ್.ಹಾಗೂ ಈರಮ್ಮ ದಂಪತಿಗಳ ಸುಪುತ್ರ ರಾಗಿರುತ್ತಾರೆ, ಕರ್ನಾಟಕ ಮತ್ತು ಗೋವಾ ಡೈರೆಕ್ಟರೆಟ್ ದಾವಣಗೆರೆ ಬಟಾಲಿಯನ್ ವ್ಯಾಪ್ತಿಯಲ್ಲಿ ಬರುವ ಈ ಕಾಲೇಜಿನಿಂದ ದೆಹಲಿಯಲ್ಲಿ ನಡೆಯುವ 2026 ರ ಗಣರಾಜ್ಯೋತ್ಸವ ಪೆರೆಡ್ ಗೆ ಈ ಬಾರಿ ಆಯ್ಕೆಯಾಗಿರುತ್ತಾರೆ,

ಇದಕ್ಕೂ ಮೊದಲು 8 ಕ್ಯಾಂಪ್ ಗಳಲ್ಲಿ ಆಯ್ಕೆಯಾಗಿ ಕೊನೆಯದಾಗಿ ದೆಹಲಿ ಗೆ ಆಯ್ಕೆಯಾಗಿರುತ್ತಾರೆ,ಇದು ಕಾಲೇಜಿಗೆ ಹಾಗೂ ಚಳ್ಳಕೆರೆ ತಾಲ್ಲೂಕಿಗೆ ಹೆಮ್ಮೆಯ ವಿಷಯ ಎಂದು ವಿಧ್ಯಾರ್ಥಿಯ ಮಾರ್ಗದರ್ಶಕರು ಮತ್ತು NCC ಅಧಿಕಾರಿಗಳು ಆದ ಕ್ಯಾಪ್ಟನ್ ಡಾ.ಸ.ರಾ.ಲೇಪಾಕ್ಷ ಹಾಗೂ ಡಾ.ಎಮ್.ಕೆ.ದೇವಪ್ಪ , ಪ್ರಾಂಶುಪಾಲರು ತಿಳಿಸಿರುತ್ತಾರೆ.

About The Author

Namma Challakere Local News
error: Content is protected !!