“ಭಕ್ತಪಾಲಕ ಮುಕ್ತಿದಾಯಕ ಶ್ರೀರಾಮಕೃಷ್ಣರು”:- ಶ್ರೀಮತಿ ರಶ್ಮಿ ವಸಂತ ಅಭಿಪ್ರಾಯ. ಚಳ್ಳಕೆರೆ:- ಶ್ರೀರಾಮಕೃಷ್ಣ ಪರಮಹಂಸರು ಭಕ್ತಪಾಲಕ ಮುಕ್ತಿದಾಯಕರಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ರಶ್ಮಿ ವಸಂತ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-೨”ರ ಗ್ರಂಥ ಪಾರಾಯಣ ಮಾಡುತ್ತ “ಭಕ್ತಪಾಲಕ” ಎಂಬ ಅಧ್ಯಾಯವನ್ನು ಓದಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ, ದಿವ್ಯತ್ರಯರಿಗೆ ಮಂಗಳಾರತಿಯನ್ನು ಸದ್ಭಕ್ತರಾದ ಶ್ರೀಮತಿ ಮಂಜುಳಾ ಉಮೇಶ್ ಅವರು ನೆರವೇರಿಸಿದರು. ಸತ್ಸಂಗದಲ್ಲಿ ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಸುಧಾಮಣಿ, ಮಾನ್ಯ,ಡಾ.ಭೂಮಿಕಾ, ಹಣ್ಣಿನ ವ್ಯಾಪಾರಿ ವೆಂಕಟೇಶ್, ಯತೀಶ್ ಎಂ ಸಿದ್ದಾಪುರ, ಯಶಸ್ವಿ, ಜಿ ಯಶೋಧಾ ಪ್ರಕಾಶ್,ಅಂಬುಜಾ ಶಾಂತಕುಮಾರ್, ಪುಷ್ಪಲತಾ,ಲಕ್ಷ್ಮೀ ಭಾಗವಹಿಸಿದ್ದರು.

About The Author

Namma Challakere Local News
error: Content is protected !!