ಚಳ್ಳಕೆರೆ : 2025-26-ನೇ ಸಾಲಿನಲ್ಲಿ ಮುಂಗಾರು ಅತಿವೃಷ್ಟಿ ಮಳೆಹಿಂದಾಗಿ ನಷ್ಟಕ್ಕೊಳಗಾದ ರೈತರು ಬೆಳೆದ ಏಕದಳ ದ್ವಿದಳ ಹಾಗೂ ತೋಟಗಾರಿಕ ಬೆಳೆಗಳಿಗೆ ಎಸ್.ಡಿ.ಆರ್.ಎಸ್
ಎನ್.ಡಿ.ಆರ್.ಎಪ್ ನಿಯಮಕ್ಕೆ ಅನುಸಾರವಾಗಿ ಬೆಳೆ ಪರಿಹಾರ ನೀಡಿ ಎಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರದಿಂದ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಛೇರಿಗೆ ದಾವಿಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಶಿರಸ್ತೆದಾರ್ ಗೆ ಮನವಿ ಸಲ್ಲಿಸಿದರು.

ಇನ್ನೂ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ,
ಕರ್ನಾಟಕ ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳಾದ
ಮೆಕ್ಕೆಜೋಳ, ಭತ್ತ, ಶೇಗ, ರಾಗಿ, ತೋಗರಿ & ಈರುಳ್ಳಿ ಸೇರಿದಂತೆ ಏಕದಳ ದ್ವಿದಳ ದಾನ್ಯಗಳನ್ನು ಬೆಂಬಲ
ಬೆಲೆಯಲ್ಲಿ ಖರೀದಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಪ್ರತಿ ಸಹಕಾರಿ ಸಂಘಗಳಲ್ಲಿ ಖರೀದಿ
ಕೇಂದ್ರಗಳನ್ನು ತೆರೆಯಲು ಕರ್ನಾಟಕ ರಾಜ್ಯದಲ್ಲಿ ಸಿದ್ದಾರಾಮಯ್ಯನವರ ನೇತ್ರತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ
ಬಂದಾಗಿನಿಂದ ಈ ನಾಡಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಪರಿಹಾರ ನೀಡುತ್ತಿಲ್ಲ ಬರದ ಸಂದರ್ಭದಲ್ಲಿ ರಾಜ್ಯ
ಸರ್ಕಾರ ಎಚ್ಚೆತ್ತುಕೊಂಡಿಲ್ಲ ಅತಿವೃಷ್ಠಿ ಸಂದರ್ಭದಲ್ಲು ತಲೆ ಕೆಡಿಸಿಕೊಂಡಿಲ್ಲ ಕಬ್ಬು ಬೆಳೆಗಾರರು ನಿರಂತರ ಹೋರಾಟ
ಮಾಡಿದರು ಸ್ಪಂದಿಸಿಲ್ಲ.

ಈಗ ಮೆಕ್ಕೆಜೋಳ ಬೆಳೆಯುವ ರೈತರು ಸಂಕಷ್ಟದಲ್ಲಿದ್ದರೆ ರಾಜ್ಯ ಸರ್ಕಾರ ಇನ್ನು ಖರೀದಿ
ಕೇಂದ್ರಗಳನ್ನು ಪ್ರರಂಬಿಸಿಲ್ಲ ಬೆಳೆ ಹಾನಿಗೆ ಪರಿಹಾರ ಘೋಷಿಸಿ ಒಂದುವರೇ ತಿಂಗಳಾದರು ಪರಿಹಾರ ಕೊಡುವಲ್ಲಿ
ರಾಜ್ಯ ಸರ್ಕಾರ ತಲೆಕೆಡಿಸಿಕೊಂಡಿಲ್ಲ ವೈರಲ್ ಇನ್ ಫೆಕ್ಷನ್ ಆಗಿ ಭತ್ತದ ಬೆಳೆ ಹಾನಿಗೊಳಗಾಗಿದೆ ರಾಜ್ಯ ಸರ್ಕಾರ
ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ರಾಜ್ಯದ ಎಲ್ಲ ಸಮಸ್ಯೆಗೂ ಕೇಂದ್ರ ಸರ್ಕಾರದ ಕಡೆ ಬೆಟ್ಟು
ತೊರಿಸುವುದು ಮತ್ತು ಪರಿಹಾರಕ್ಕಾಗಿ ಅವರ ಕಡೆ ಮುಖ ನೋಡುವುದಷ್ಟೇ ಸಿದ್ದಾರಾಮಯ್ಯನವರ ನೇತೃತ್ವದ
ಕಾಂಗ್ರೇಸ್ ಸರ್ಕಾರ ಸೀಮಿತವಾಗಿದೆ.

ಆದ್ದರಿಂದ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಕೂಡಲೆ ಪರಿಹಾರ
ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಸುರೇಶ್ , ಕಾರ್ಯದರ್ಶಿ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್, ಮಂಜುನಾಥ್, ಡಾ.ರಾಮರಾಜ್, ಮಹಿಳಾ ಮೋರ್ಚಾ ತಿಮ್ಮಕ್ಕ, ಈಶ್ವರ್ ನಾಯಕ, ಶಿವಣ್ಣ, ಗುರುಮೂರ್ತಿ, ಇತರ ಬಿಜೆಪಿ ಮುಖಂಡರು ಇದ್ದರು.

About The Author

Namma Challakere Local News
error: Content is protected !!