ಚಳ್ಳಕೆರೆ: ಕುಸಿದು ಬೀಳಲಿರುವ ನೀರಿನ ಟ್ಯಾಂಕ್ :
ಅತಂಕದಲ್ಲಿ ಜನರು
ಚಳ್ಳಕೆರೆ ದೇವರಮರಿಕುಂಟೆ ಗ್ರಾಮದಲ್ಲಿ ದಶಕಗಳಷ್ಟು
ಹಳೆಯದಾದ ಕುಡಿಯುವ ನೀರಿನ ಓವರ್ಹೆಡ್ ಟ್ಯಾಂಕ್
ಶಿಥಿಲಾವಸ್ಥೆಗೆ ತಲುಪಿದ್ದು, ಬೀಳುವ ಆತಂಕದಲ್ಲಿದೆ.
ನಿರ್ವಹಣೆ ಕೊರತೆ, ಸ್ವಚ್ಛತೆಯಿಲ್ಲದ ಕಾರಣ ಕಲುಷಿತ ನೀರು
ಪೂರೈಕೆಯಾಗುತ್ತಿದ್ದು, ಗ್ರಾಮಸ್ಥರು ಅಧಿಕಾರಿಗಳು ಹಾಗೂ
ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ದೂರಿದ್ದಾರೆ. ಈ ಅಪಾಯಕಾರಿ
ಟ್ಯಾಂಕ್ ಜನರ ಜೀವಕ್ಕೆ ಆಪತ್ತು ತರುವ ಭೀತಿ ಎದುರಾಗಿದೆ.

