ಪುನೀತ್ ರಾಜ್‍ಕುಮಾರ್ ನಟನಾಗಿ ಮಾತ್ರವಲ್ಲ, ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಗಳಿಂದ ಇತರರಿಗೆ ಮಾದರಿಯಾಗಿದ್ದವರು .ಆದರೆ ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಸರಳತೆ, ಸಜ್ಜನಿಕೆ, ಬದುಕಿನ ಬಗೆಗಿನ ಪ್ರೀತಿ ಅವರನ್ನು ಎಲ್ಲರೆದೆಯಲ್ಲಿ ಜೀವಂತವಾಗಿಸಿದೆ ಎಂದು ನೇತಾಜಿ ಸ್ನೇಹ ಬಳಗ ಅಧ್ಯಕರಾ ನೇತಾಜಿ ಪ್ರಸನ್ನ ಹೇಳಿದರು.
ನಗರದ ಬನಾಶ್ರೀ ವೃದ್ದಾಶ್ರಮದಲ್ಲಿ ವಿಭಾ ಚಿಟ್ ಪಂಡ್ ಹಾಗೂ ನೇತಾಜೀ ಸ್ನೇಹ ಬಳಗದ ವತಿಯಿದ ನಾಯಕ ನಟ ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರದಲ್ಲಿ ಪುನೀತರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸ ಅವರು ಮಾತನಾಡಿ. ಅಪ್ಪು ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆ ಅಪ್ಪು ಅವರು ಸಮಾಜಕ್ಕೆ ಹಲವಾರು ಕೊಡುಗೆಗಳನ್ನ ನೀಡಿದ್ದಾರೆ ಅಪ್ಪು ಅಜರಾಮರ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿದಂತಹ ಕಾರ್ಯಗಳು ಸದಾ ಸ್ಮರಣೀಯ ಎಂದರು…
ವಿಭಾ ಚಿಟ್ ಪಂಡ್ ನ ಮಾಲೀಕರಾದ ಕುಮಾರ್ ಸ್ವಾಮಿ ಮಾತನಾಡಿ , ಪುನೀತ್ ರಾಜಕುಮಾರ್ ಅವರ ನಟನೆ ಸಾಮಾಜಿಕ ಕಾರ್ಯ ಮತ್ತು ದಾನಗಳಲ್ಲಿ ತಮ್ಮ ಸಾಧನೆಗಳನ್ನು ಮಾಡಿದ್ದಾರೆ.ಎಂದಿಗೂ ಮಾಸದ ನಗುಮೊಗದ ಅಪ್ಪುವಿಗೆ ಪುಣ್ಯಸ್ಮರಣೆಯ ಪ್ರೀತಿಪೂರ್ವಕ ನಮನಗಳು ಎಂದರು.
ಬನಾಶ್ರೀ ವೃದ್ಧಾಶ್ರಮದ ಸಂಸ್ಥಾಪಕ ಎಸ್ ಮಂಜುಳಮ್ಮ ಮಾತನಾಡಿ ಪುನೀತ್ ರಾಜಕುಮಾರ್ ಅಂದ್ರೆ ಎಲ್ಲರಿಗೂ ಇಷ್ಟ ಅವರು ಅಕಾಲಿಕ ಮರಣ ಎಲ್ಲರಿಗೂ ನೋವು ತಂದಂತಹ ವಿಷಯ. ಅವರು ಮಾಡಿದಂತಹ ಸಾಮಾಜಿಕ ಕಾರ್ಯಗಳು ಇಂದಿಗೂ ಸಹ ಜೀವಂತವಾಗಿವೆ.. ಪುನೀತ್ ರಾಜಕುಮಾರ್ ಅವರು ಶಕ್ತಿಧಾಮ ಮತ್ತು ಅನೇಕ ದಾನ ಧರ್ಮಗಳನ್ನು ಮಾಡಿದ್ದರು ಆದರೆ ಅವರು ಯಾವುದಕ್ಕೂ ಪ್ರಚಾರ ಬಯಸಲಿಲ್ಲ ಹಾಗೆ ಅವರ ಸ್ಪೂರ್ತಿಯಿಂದ ನಮ್ಮ ವೃದ್ಧಾಶ್ರಮ ನಡೆಯುತ್ತಿದೆ ಎಲ್ಲರಿಗೂ ಅವರು ಸ್ಪೂರ್ತಿದಾಯಕವಾಗಿದ್ದಾರೆ ಎಂದರು..
ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಎಂ.ರಮೇಶ ಮಾತನಾಡಿದರು.
ಈ ವೇಳೆ ಸುಧಾಕರ್,
ಗುತ್ತಿಗೆದಾರರ ನಾಗೇಂದ್ರ ,ಪಾಲಯ್ಯ ಪೆಟ್ರೋಲ್ ಬಂಕ್ ಮಾಲೀಕರದ ಜೈ ಶಂಕರ್ ವಿಭಾ ಚಿಟ್ ಪಂಡ್ ನ ಸಿಬ್ಬಂದಿ ಸೌಂದರ್ಯ ,ಸೋನಿಕ,ಹಾಗೂ ನೇತಾಜಿ ಸ್ನೇಹ ಬಳಗದ ಪದಾಧಿಕಾರಿಗಳು ಹಾಗೂ ವೃದ್ಧಾಶ್ರಮದ ಹಿರಿಯರು ಇದ್ದರು..

