“ಶ್ರೀಶಾರದಾಶ್ರಮದಲ್ಲಿ ಯುಗಾವತಾರ ಶ್ರೀರಾಮಕೃಷ್ಣ ಭಾಗ-2ರ ಗ್ರಂಥ ಪಾರಾಯಣ ಕಾರ್ಯಕ್ರಮ”. ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ವೆಂಕಟಲಕ್ಷ್ಮೀ ಅವರು ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ಅವರು ಬರೆದಿರುವ “ಯುಗಾವತಾರ ಶ್ರೀರಾಮಕೃಷ್ಣ ಭಾಗ-2″ರ ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅವರು “ಶಿರಬಾಗಿದ ಬಂಕಿಮ” ಎಂಬ ಅಧ್ಯಾಯವನ್ನು ಓದಿದರು.
ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ, ವಿಶೇಷ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ ಹಾಗೂ ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಪುಸ್ತಕ ಪಾರಾಯಣದಲ್ಲಿ ಶ್ರೀಮತಿ ಗೀತಾವಾಣಿ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಜಿ ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಚೇತನ್ ಕುಮಾರ್, ಪುಷ್ಪಲತಾ ಉಪಸ್ಥಿತರಿದ್ದರು .

About The Author

Namma Challakere Local News
error: Content is protected !!