ಚಳ್ಳಕೆರೆ : ಮಕ್ಕಳಲ್ಲಿ ಜಾಗೃತಿ ಹಾಗೂ ಶುಚಿತ್ವದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅದರ ಬಳಕೆ ಕೂಡ ಅಭ್ಯಾಸವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.

ನಗರದ ಪಿಎಂಶ್ರೀ ಸರಕಾರಿ ಮಾದರಿ ಹಿರಿಯ ಬಾಲಕಿಯರ ಶಾಲೆಯಲ್ಲಿ
ಜೆ ಎಸ್ ಡಬ್ಲ್ಯೂ ಮತ್ತು ಕೆಎಂ ಎಸ್ ಪಿ ಪಿ ವತಿಯಿಂದ ಗ್ರಾಮಲಾಯ ಫೌಂಡೇಶನ್ ನಿರ್ಮಿಸಿದ ಗಂಡು ಹೆಣ್ಣು ಪ್ರತ್ಯೇಕ ಹೈಟೆಕ್ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದರು, ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಹೊದಗಿಸುವ ಮೂಲಕ ದಿನ ನಿತ್ಯದ ಜೀವನಲ್ಲಿ ಕಲಿಕೆಗೆ ಹಿಂಬು ನೀಡುತ್ತದೆ ಎಂದರು.

ಇನ್ನೂ ಹೈಟೆಕ್ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮಾರುತೇಶ್, ಸರಕಾರಿ ಶಾಲೆಗಳ ಉನ್ನತೀಕರಣಕ್ಕೆ ಇಂತಹ ದಾನಿಗಳ ನೆರವು ಅಗತ್ಯ, ಇಂದು ನಿರ್ಮಿಸಿದ ಗಂಡು ಹೆಣ್ಣು ಪ್ರತ್ಯೇಕ ಹೈಟೆಕ್ ಶೌಚಾಲಯ ನಗರದಲ್ಲಿ ಮಾದರಿಯಾಗಿವೆ ಇದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಗಣನೀಯ ಸಂಖ್ಯೆ ಹೆಚ್ಚಳವಾಗುತ್ತದೆ ಎಂದರು.

ಇದೇ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತೇಶ್, ಮುಖ್ಯ ಶಿಕ್ಷಕರಾದ ಹೇಮರಾಜು, ಶಿಕ್ಷಕರಾದ ನಾಗಾರುಣ್, ಗ್ರಾಮಲಾಯ ಫೌಂಡೇಶನ್ ನ ಸಿಬ್ಬಂದಿಗಳು ಮಕ್ಕಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!