ಚಳ್ಳಕೆರೆ :

ಚಳ್ಳಕೆರೆ :
ಕರ್ನಾಟಕ ರಾಜ್ಯ ಪೌರ ನೌಕರರ ಸಂಘ (ರಿ) ವತಿಯಿಂದ ಪೌರ ವೃಂದದ ನೌಕರರ ಪ್ರಮುಖ
ಬೇಡಿಕೆಗಳಾದ ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು ಹಾಗೂ ಕೆ.ಜಿ.ಐ.ಡಿ, ಜಿ.ಪಿ.ಎಫ್,
ಜ್ಯೋತಿ ಸಂಜೀವಿನಿ, ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ
ಮಾಡಬೇಕು ಎಂದು ಕಳೆದ ನಾಲ್ಕು ದಿನಗಳಿಂದ ಅನಿದಿಷ್ಟ ಧರಣಿ ನಡೆಸುತ್ತಿದ್ದಾರೆ.

ಚಳ್ಳಕೆರೆ ನಗರದ ನಗರಸಭೆ ಕಛೇರಿಯ ಮುಂಭಾಗದಲ್ಲಿ ಪೌರ ನೌಕರರು, ಪೌರಕಾರ್ಮಿಕರು, ಹಾಗೂ ಸಿಬ್ಬಂದಿ ವರ್ಗ ಸೇರಿ ಧರಣಿ ನಡೆಸುತ್ತಿದ್ದಾರೆ.

ಹಾಗೂ ಸುಮಾರು 25-30 ವರ್ಷಗಳಿಂದ ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರು
ಸರಬರಾಜು ಸಿಬ್ಬಂದಿಗಳು, ಲೋಡರ್, ಗುತ್ತಿಗೆ ಲೆಕ್ಕಿಗರು, ಕ್ಲೀನರ್ಸ್, ಪೌರಕಾರ್ಮಿಕರು, ಸೂಪ‌ವೈಸರ್,
ಕಂಪ್ಯೂಟರ್ ಆಪರೇಟರ್, ಜ್ಯೂನಿಯರ್ ಪ್ರೋಗ್ರಾಮರ್‌, ಇನ್ನಿತರೆ ಗುತ್ತಿಗೆ/ಹೊರಗುತ್ತಿಗೆ ಮೂಲಕ ಕಾರ್ಯ
2022-23 ನೇ ಸಾಲಿನಲ್ಲಿ ಪೌರಕಾರ್ಮಿಕರ ವಿಷೇಶ ನೇಮಕಾತಿಯಡಿ ಪೌರಕಾರ್ಮಿಕರು ನೇಮಕಾತಿ ಹೊಂದಿದ್ದು,
ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೇರಪಾವತಿ ವೇತನ ಮಾಡುವುದು, ಖಾಯಂ ಮಾಡುವುದು, ಹೊಸದಾಗಿ
ಸದರಿ ನೌಕರರಿಗೆ ಸರ್ಕಾರವು ನಗರ ಸ್ಥಳೀಯ ಸಂಸ್ಥೆಯ ಸ್ಥಳೀಯ ನಿಧಿಯಿಂದ ವೇತನ ಪಡೆಯಲು
ಆದೇಶಿಸಿಲಾಗಿದ್ದನ್ನು ರದ್ದುಪಡಿಸಿ, ಎಸ್.ಎಫ್.ಸಿ
ಅನುದಾನದಡಿ ವೇತನವನ್ನು ನೀಡುವುದು, ಇತ್ಯಾದಿ
ಸೌಲಭ್ಯಗಳನ್ನು ಪಡೆಯಲು ಹಂತ ಹಂತವಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿರುವುದರಿಂದ ಎಲ್ಲ,
ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಡೆಸಲಾಗುತ್ತದೆ ಎಂದರು.

About The Author

Namma Challakere Local News
error: Content is protected !!