ಚಳ್ಳಕೆರೆ :
ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ ವಯೋ ನಿವೃತ್ತಿ ಸನ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸುಮಾರು 28 ವರ್ಷಗಳ ಕಾಲ ಆಂಗ್ಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹೆಚ್ ಆರ್ ಹಬೀಬುಲ್ಲ ಮತ್ತು 28 ವರ್ಷಗಳ ಕಾಲ ಭೌತಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರವಿ ಕುಮಾರ್ ಹಾಗೂ ಇದೇ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಪದೋನತ್ತಿ ಹೊಂದಿ ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ ) ಚಿತ್ರದುರ್ಗ ಜಿಲ್ಲೆಯ ಉಪ ನಿರ್ದೇಶಕರಾಗಿ ನೇಮಕಗೊಂಡಿರುವ ಕೆ ತಿಮ್ಮಯ್ಯ. ರವರನ್ನು ಕಾಲೇಜ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯ ಎಂ ರವೀಶ್ ಮಾತನಾಡಿ, ನಾನು ಈ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುತ್ತೇನೆ ನನ್ನ ಸೇವಾ ಅವಧಿಯಲ್ಲಿ ಉಪನ್ಯಾಸಕರ ಜೊತೆಯಲ್ಲಿ ಉತ್ತಮ ಬಾಂಧವ್ಯ ಇಟ್ಟುಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದೇನೆ ಎಂದರು.
ನಮ್ಮ ಜಿಲ್ಲೆಗೆ ನೂತನ ಉಪ ನಿರ್ದೇಶಕರಾಗಿ ನೇಮಕಗೊಂಡಿರುವ ಕೆ ತಿಮ್ಮಯ್ಯ ರವರಿಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯಆತಿಥಿಗಳಾಗಿ ಆಗಮಿಸಿದ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್ ಲಕ್ಷ್ಮಣ ಮಾತನಾಡಿ,
ನಾನು ಸಹ ಈ ಕಾಲೇಜಿನಲ್ಲಿ 14 ವರ್ಷ ಸೇವೆ ಸಲ್ಲಿಸಿ ನಿವೃತ್ತ ಹೊಂದಿರುವ ಹೆಚ್. ಅರ್ ಅಭಿಬುಲ್ಲ ಮತ್ತು ಅವರ ಕುಟುಂಬದೊಡನೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದೆ ಇವರು ಸದಾ ಹಸನ್ಮುಖಿಯಾಗಿ ಜಾತ್ಯಾತೀತವಾಗಿ ಧರ್ಮರಹಿತವಾಗಿ ಕೆಲಸ ಮಾಡುತ್ತಿದ್ದರು ಇವರು ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸುತ್ತಾ ಜಿಲ್ಲೆಗೆ ನೇಮಕಗೊಂಡಿರುವ ನೂತನ ಉಪ ನಿರ್ದೇಶಕರಾದ ಕೆ ತಿಮ್ಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರು ಹಾಗೂ ನೂತನ ಉಪ ನಿರ್ದೇಶಕರು ಮಾತನಾಡಿ ಈ ಕಾಲೇಜು ನನಗೆ ಉನ್ನತ ಶ್ರೇಯಸ್ಸು ಮತ್ತು ಕೀರ್ತಿಯನ್ನು ತಂದುಕೊಟ್ಟಿದೆ ಹಾಗಾಗಿ ನಾನು ಈ ಕಾಲೇಜನ್ನು ಸದಾ ಸ್ಮರಿಸುತ್ತೇನೆ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿ ಎನ್ ಕೃಷ್ಣ ಪ್ರಸಾದ್, ನಿವೃತ್ತ ಜಂಟಿ ನಿರ್ದೇಶಕರು ಪ್ರಾಚಾರ್ಯ ವಸಂತಕುಮಾರ್, ಲಲಿತಮ್ಮ ದೇವೇಂದ್ರಪ್ಪ ಪ್ರಭಾರ ಪ್ರಾಚಾರ್ಯ ಪುಷ್ಪಲತಾ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಸಿಬ್ಬಂದಿ ಕಾರ್ಯದರ್ಶಿ ಎಂ ಶ್ರೀನಿವಾಸ್ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಸಾಹಿತಿ ನಾಗರಾಜ್ ಬೆಳಗಟ್ಟ ಎನ್ಎಸ್ಎಸ್ ಅಧಿಕಾರಿ ಶಾಂತಕುಮಾರಿ ಉಪನ್ಯಾಸಗಳಾದ ರುಕ್ಮಿಣಿ ಜಬಿವುಲ್ಲಾ ತಿಪ್ಪೇಸ್ವಾಮಿ ಮಂಜುನಾಥ್ ಇತರರು ಉಪಸ್ಥಿತರಿದ್ದರು.

