ಚಳ್ಳಕೆರೆ : ಸಂತ ಶ್ರೀ ದೇವರ ದಾಸಿಮ್ಮನವರ ಜಯಂತಿ ಮಹೋತ್ಸವ ಏಪ್ರಿಲ್ 19ರಂದು ಶನಿವಾರ ಸಂಜೆ 4 ಗಂಟೆಯಿಂದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲಾ ಆವರಣದ ಸಭಾಭವನದಲ್ಲಿ ತಾಲೂಕಿನ ಎಲ್ಲಾ ನೇಕಾರ ಸಮುದಾಯದಿಂದ ವಿಜೃಂಭಣೆಯಾಗಿ ಅರ್ಥಗರ್ಭಿತವಾಗಿ ಶ್ರೀ ದೇವರ ದಾಸಿಮಯ್ಯ ನವರ ಜಯಂತಿ ಆಚರಿಸಲಾಗುವುದು ಎಂದು ನೇಕರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಆರ್ ಜಯರಾಂ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು 19ರಂದು ನಡೆಯುವಂತಹ ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧವಾಗಿ ನೇಕಾರ ಸಮುದಾಯದ ಅಂಕಿ ಅಂಶಗಳನ್ನು ತೋರಿಸದೆ ಕೇವಲ ನೇಕಾರ ವೃತ್ತಿ ಮಾಡುವಂತ ಎಲ್ಲರಿಗೂ ಅನ್ವಯವಾದರೆ ನೇಕಾರ ಜಾತಿಯಲ್ಲಿ ಹುಟ್ಟಿದ ನಮಗೆ ಅನ್ಯಾಯವಾಗುತ್ತದೆ.
ಆದ್ದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನೇಕಾರ ಸಮುದಾಯದವನ್ನು ಪರಿಗಣಿಸಬೇಕು ಮೀಸಲಾತಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ನೇಕಾರ ಕೇವಲ ವೃತ್ತಿಯಲ್ಲ ಜಾತಿಯು ಕೂಡ ಹೌದು ಆದರೆ ಈಗಿನ ಸರ್ಕಾರ ನೇಕಾರ ವೃತ್ತಿ ಮಾಡುವಂತಹ ಎಲ್ಲರನ್ನು ಸಮುದಾಯಕ್ಕೆ ಸೇರಿಸುವುದರಿಂದ ಮೂಲತಃ ನೇಕಾರ ಜಾತಿಯೊಳಗಿರುವಂತಹ ನಮ್ಮಂತವರಿಗೆ ಅನ್ಯಾಯ ಉಂಟಾಗುತ್ತದೆ ಆದ್ದರಿಂದ ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೇಕರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಆರ್ ಜೈರಾಮ್, ಎಚ್ ತಿಪ್ಪೇಸ್ವಾಮಿ, ಕೆ ಸಿ ವೀರೇಶ್, ರವಿಕುಮಾರ್, ಎಂಆರ್ ವೆಂಕಟೇಶ್, ಎಸ್ ಟಿ ಗುರುಮೂರ್ತಿ, ಭಾಸ್ಕರ್ ರಾವ್, ಗಾಯಕ್ವಾಡ್, ಕೋಲಮ್ಮಹನಳ್ಳಿ ಪೀತಾಂಬರ, ಗೌತಮ್, ಏರಿಸ್ವಾಮಿ ರವಿವಾಸೆ ,ಮಂಜುನಾಥ್, ವಿರೂಪಾಕ್ಷಪ್ಪ, ಚಂದ್ರಶೇಖರ್, ರಂಜಿತ್, ಈಶ್ವರಪ್ಪ, ತಿಪ್ಪೇರುದ್ರಪ್ಪ, ಇನ್ನು ಹಲವರು ಹಾಜರಿದ್ದರು.


