ಚಳ್ಳಕೆರೆ :
ಹೊಸದುರ್ಗ: ಹೊನ್ನಿನ ದೈವ ಕಂಚಿವರದರಾಜಸ್ವಾಮಿ
ರಥೋತ್ಸವ
ಹೊಸದುರ್ಗ ತಾಲೂಕಿನ ಕಂಚಿಪುರದಲ್ಲಿ ನೆಲೆಸಿರುವ ನಾಣ್ಯಪ್ರಿಯ
ಹೊನ್ನಿನ ದೈವ ಕಂಚಿ ವರದರಾಜ ಸ್ವಾಮಿಯ, ರಥೋತ್ಸವ
ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದು ನಸುಕಿನಲ್ಲಿ ಅತ್ಯಂತ
ವಿಜೃಂಭಣೆಯಿಂದ ನಡೆಯಿತು.
ಇಂದು ಬೆಳಗ್ಗೆ ಐದು ಗಂಟೆಗೆ
ಸ್ವಾಮಿ ವಿಶೇಷ ನರ್ತನದೊಂದಿಗೆ ರಥವೇರಿತು. ಸುತ್ತಲೂ
ನಾಣ್ಯಗಳ ಸುರಿಮಳೆಯಾಯಿತು. ನಂತರ ಭಕ್ತರು ರಥ ಎಳೆದರು.
ಕಂಚಿ ವರದರಾಜ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು, ಈಡೇರಿಸಿದಾಗ
ಭಕ್ತರು ಸ್ವಾಮಿಗೆ ನಾಣ್ಯಗಳನ್ನು ಸಮರ್ಪಿಸುವರೆಂದು ಅರ್ಚಕರು
ಹೇಳಿದ್ದಾರೆ.

