] ✍️ರಾಮುದೊಡ್ಮನೆ ಚಳ್ಳಕೆರೆ : ನಗರದ ಪಾವಗಡ ರಸ್ತೆಯಲ್ಲಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಸಮಾಜ ವಿಜ್ಞಾನದ ಶಿಕ್ಷಕರಾದ ಮಲ್ಲಿಕಾರ್ಜುನ್ ರವರು ವಿದ್ಯಾರ್ಥಿಗಳಿಗೆ ನೇತಾಜಿ ಅವರ ಜೀವನ ಚರಿತ್ರೆಯನ್ನು ತುಂಬಾ ಅಚ್ಚುಕಟ್ಟಾಗಿ ವಿವರಿಸಿದರು. “
” ನೀವುಗಳು ನಮಗೆ ರಕ್ತ ಕೊಡಿ, ನಾನು ನಿಮಗೆ ಸ್ವತಂತ್ರವನ್ನು ತಂದು ಕೊಡುತ್ತೇನೆ “” ಎಂಬ ಹೇಳಿಕೆಯ ಬಗ್ಗೆ ಬಹಳ ವಿವರಣೆಯನ್ನು ನೀಡಿದರು.
ವಿದ್ಯಾರ್ಥಿಗಳು ದೇಶಭಕ್ತಿಯನ್ನು ಸದಾ ಮೈಗೂಡಿಸಿಕೊಂಡಿರಬೇಕೆಂದು ಸಂಸ್ಥೆಯ ಕಾರ್ಯದರ್ಶಿಗಳಾದ ಮಂಜುನಾಥ ತಿಳಿಸಿಕೊಟ್ಟರು.
ಉಪಾಧ್ಯಕ್ಷರಾದ ರಾಮ್ ಪ್ರಸಾದ್, ಜಗದೀಶ್ , ಪವಿತ್ರ, ಸಂಸ್ಥೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ

