ರಂಗಭೂಮಿ ಕಲಾ ಪೋಷಣೆಗೆ ಸಹಕಾರ ನೀಡುವೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ ವೀರಭದ್ರಪ್ಪ ಭರವಸೆ.

ನಾಯಕನಹಟ್ಟಿ:: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಲಾವಿದರಿಗೆ ಬೆನ್ನೆಲುಬಾಗಿ ನಿಲ್ಲುವೆ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ. ವೀರಭದ್ರಪ್ಪ ಹೇಳಿದ್ದಾರೆ.

ಅವರು ಬುಧವಾರ ರಾತ್ರಿ ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚೌಳಕೆರೆ ಗ್ರಾಮದಲ್ಲಿ ಶ್ರೀ ಊರ ಮಾರಮ್ಮ ಜಾತ್ರೆ ಪ್ರಯುಕ್ತ ಚೌಳಕೆರೆ ಶ್ರೀ ಚನ್ನಬಸವೇಶ್ವರ ನಾಟ್ಯ ಕಲಾಸಂಘ ವತಿಯಿಂದ ಹಾಗೂ ದಿವಂಗತ ಶ್ರೀ ಪಟೇಲ್ ಪಾಪನಾಯಕ ಮಾಜಿ ಶಾಸಕರು ಇವರ ಜ್ಞಾಪಕಾರ್ಥಕವಾಗಿ ಪ್ರೇಮ ತ್ಯಾಗ- ಅರ್ಥಾರ್ಥ ಯಾರ ಹೂವು ಯಾರ ಮಡಲಿಗೆ ಎಂಬ ಸಾಮಾಜಿಕ ನಾಟಕದಲ್ಲಿ ಕಲಾವಿದರನ್ನು ಉದ್ದೇಶಿಸಿ ಮಾತನಾಡಿದರು. ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಅತ್ಯಂತ ಮಹತ್ವ ಸರ್ಕಾರ ರಂಗಭೂಮಿ ಕಲಾವಿದರಿಗೆ ಮಾಶಾಸನವನ್ನು ಹೆಚ್ಚಿಸಿ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಚೌಳಕೆರೆ ಗ್ರಾಮದ ಗುರು – ಹಿರಿಯರು ಯಜಮಾನರು ಹಾಗೂ ಸಿ.ಬಿ. ಮೋಹನ್, ಬಗರು ಹುಕುಂ ಕಮಿಟಿ ಸದಸ್ಯ ಪಿ.ಜಿ. ಬೋರನಾಯಕ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ಡಿ.ಬಿ ಕರಿಬಸಪ್ಪ ಚೌಳಕೆರೆ. ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಗಜೇಂದ್ರಪ್ಪ, ಬಿ ಸಣ್ಣ ಪಾಲಯ್ಯ, ಹಾಗೂ ಕಲಾವಿದರಾದ ಎಸ್ಎಸ್ ಭದ್ರಿ, ಬಿ ಗೋವಿಂದರಾಜ್, ಬಿ ತಿಪ್ಪೇಸ್ವಾಮಿ, ಬಿ ಉಮೇಶ್ ಪಿ.ಸಣ್ಣ ಪಾಲಯ್ಯ, ಎ ಬಿ ಗೋವಿಂದರಾಜ್, ಕೆ ಆರ್ ಬಸಣ್ಣ, ಸಿ ಪಿ ಮಂಜುನಾಥ್ ಸಮಸ್ತ ಚೌಳಕೆರೆ ಗ್ರಾಮಸ್ಥರು ಇದ್ದರು,

About The Author

Namma Challakere Local News
error: Content is protected !!