“ಮಕ್ಕಳಿಗೆ ಸ್ವಾಮಿ ವಿವೇಕಾನಂದರ ದೇಶಭಕ್ತಿ ಆದರ್ಶವಾಗಲಿ”:- ಸಿ.ಎಸ್.ಭಾರತಿ ಅನಿಸಿಕೆ.

                    ಚಳ್ಳಕೆರೆ:-ವಿಶ್ವಮಾನವ ಸ್ವಾಮಿ ವಿವೇಕಾನಂದರು ಹೊಂದಿದ್ದ ದೇಶಭಕ್ತಿ ಇಂದಿನ ಮಕ್ಕಳಿಗೆ ಆದರ್ಶವಾಗಲಿ ಎಂದು ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶ್ರೀಮತಿ ಸಿ.ಎಸ್ ಭಾರತಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.  

ತಾಲ್ಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಜೀವನ ಮತ್ತು ಅವರ ಸಂದೇಶಗಳನ್ನು ನಾವು ಸಮಗ್ರವಾಗಿ ಅಧ್ಯಯನ ಮಾಡಿದಾಗ ಅದರಲ್ಲಿ ಮುಖ್ಯವಾಗಿ ಕಂಡುಬರುವ ಅಂಶವೆಂದರೆ ಅದು ಸ್ವಾಮೀಜಿ ಅವರ ಅಪರಿಮಿತ ರಾಷ್ಟ್ರಪ್ರೇಮ ಎಂಬುದು, ಆದ್ದರಿಂದ ಈಗಿನ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳು ದಾರಿದೀಪವಾಗಿ ಉತ್ತಮ ಪ್ರಜೆಗಳಾಗಿ ಸದೃಢ-ಸಮರ್ಥ ರಾಷ್ಟ್ರವನ್ನು ಕಟ್ಟುವ ಬಹುದೊಡ್ಡ ಜವಾಬ್ದಾರಿ ಮಕ್ಕಳಿಗಿದೆ. ಮಹಾತ್ಮರ ಜಯಂತ್ಯುತ್ಸವದ ಶುಭ ಸಂದರ್ಭದಲ್ಲಿ ನಾವು ಸತ್ ಸಂಕಲ್ಪಗಳನ್ನು ಕೈಗೊಂಡು ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ವಿದ್ಯಾರ್ಥಿಗಳಿಗೆ “ಧ್ಯಾನ” ಮತ್ತು “ಸ್ವಾಮಿ ವಿವೇಕಾನಂದರ ಕುರಿತು ಭಜನೆ ಹಾಗೂ “ಚೈತನ್ಯ ಚಿಲುಮೆ ಸ್ವಾಮಿ ವಿವೇಕಾನಂದರು”ಎಂಬ ವಿಷಯವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ “ಸ್ವಾಮಿ ವಿವೇಕಾನಂದರ ಧ್ಯಾನಸಿದ್ದಿ”ಗೆ ಸಂಬಂಧಿಸಿದ ಕಿರುನಾಟಕ ಪ್ರದರ್ಶನ ನಡೆಯಿತು. ಈ ಜಯಂತಿ ಕಾರ್ಯಕ್ರಮದಲ್ಲಿ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ವೆಂಕಟೇಶ್, ಸಹಶಿಕ್ಷಕರಾದ ಶಶಿಕಲಾ,ಸುನೀತ, ಅಡಿಗೆ ಸಿಬ್ಬಂದಿ ಬೋರಮ್ಮ,ಪಾಪಮ್ಮ, ವಿದ್ಯಾರ್ಥಿಗಳಾದ ನವೀಕ, ವಿನುತ,ಪ್ರಣವ್, ಅನನ್ಯ, ಮಿಥುನ್ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!