. ಪೋಷಕರು ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಉತ್ತಮ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಪ್ಪ.

ನಾಯಕನಹಟ್ಟಿ::ಜ.20. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರವನ್ನ ಪೋಷಕರು ಕಲಿಸಬೇಕು ಎಂದು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಪ್ಪ ಹೇಳಿದರು.

ಸೋಮವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಡಿಹಳ್ಳಿ ಹೊಸೂರು ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ
ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು.
ಸಮಗ್ರ ಶಿಕ್ಷಣ ಅಭಿಯಾನ ಕರ್ನಾಟಕ ಸಮಾಜಿಕ ಪರಿಶೋಧನಾ ಶಾಲಾ ಸಭೆ /ಪೋಷಕರ ಸಭೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಪೋಷಕರು ಮಾಡಬೇಕಾಗಿದ್ದ ಕರ್ತವ್ಯ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಸರ್ಕಾರದಿಂದ ಆಗಬೇಕಾದ ಕೆಲವೊಂದು ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿ ಶಿಕ್ಷಣದಲ್ಲಿ ಆಗಬೇಕಾದ ಹೊಸ ಬದಲಾವಣೆಯ ಕುರಿತಾದ ಪೋಷಕರಲ್ಲಿನ ಚಿಂತನೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಮುಖಂಡ ಆನಂದಪ್ಪ ಮಾತನಾಡಿದರು. ಗ್ರಾಮಸ್ಥರು ಶಾಲೆಯ ದಾಖಲಾತಿ ಹೆಚ್ಚಿಸಲು ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಗ್ರಾಮದ ಸರ್ಕಾರಿ ಶಾಲೆಗೆ ಸೇರಿಸಿ ಶಾಲೆಯ ಉಳಿವಿಗೆ ಪ್ರತಿಯೊಬ್ಬರೂ ಸಹಕರಿಸಿ ಎಂದರು.

ಗ್ರಾಮಸ್ಥ ಸುರೇಂದ್ರಪ್ಪ ಮಾತನಾಡಿದರು ರಾಜ ಸರ್ಕಾರ ಸಮಗ್ರ ಶಿಕ್ಷಣ ಸಾಮಾಜಿಕ ಪರಿಶೋಧನೆ ಯೋಜನೆಯನ್ನು ಜಾರಿಗೆ ತಂದಿರುವುದು ಸಂತಸದ ವಿಷಯ ಶಿಕ್ಷಕರ ಪೋಷಕರ ಮತ್ತು ಮಕ್ಕಳ ಅವಿನಾಭಾವ ಸಂಬಂಧ ಉತ್ತಮವಾಗಿರುತ್ತದೆ ಪ್ರತಿಯೊಬ್ಬರೂ ಶಿಕ್ಷಣವನ್ನ ಕೊಡಿಸಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಇನ್ನೂ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಮುಖ್ಯ ಶಿಕ್ಷಕ ಎನ್. ಮಹಾಂತೇಶ್ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸದಸ್ಯರಾದ ಸುರೇಶ್, ರಮೇಶ್, ಯುವ ಮುಖಂಡ ತಿಪ್ಪೇಶ್ ಬುಜ್ಜಿ, ಗ್ರಾಮದ ಮಹಿಳೆರಾದ ಗಂಗಮ್ಮ ಸುಮಾ ಲಕ್ಷ್ಮಿ ಅಡಿಗೆ ಸಿಬ್ಬಂದಿ ಭಾಗ್ಯಮ್ಮ, ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು

About The Author

Namma Challakere Local News
error: Content is protected !!