ಚಿತ್ರದುರ್ಗ

ಹೂವು ತರಲು ಹೋದ ವ್ಯಕ್ತಿ ಸ್ಮಶಾನ ಸೇರಿದರು.

ಹಿರಿಯೂರು ಮಾರುಕಟ್ಟೆಯಿಂದ ಹೂವು ತರಲು ಹೋಗುತ್ತಿದ್ದ ವ್ಯಕ್ತಿ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ.. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, 50 ವರ್ಷದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜಡಗೊಂಡನಹಳ್ಳಿಯ ಶಿವಾನಂದ ಎಂಬುವವರೇ ಅಪಘಾತಕ್ಕೆ ಬಲಿಯಾದ ವ್ಯಕ್ತಿಯಾಗಿದ್ದಾರೆ..

ಹಿರಿಯೂರಿನ ಮಾರುಕಟ್ಟೆಯಲ್ಲಿ ಹೂವು ತರಲು ಶಿವಾನಂದ ಹೋಗುತ್ತಿದ್ದರು.. ಈ ವೇಳೆ ಹಿರಿಯೂರು ತಾಲ್ಲೂಕು ಚಿನ್ನಯ್ಯನಹಟ್ಟಿ ಗ್ರಾಮದ ಬಳಿ ಅಪರಿಚಿತವಾಗಿ ವಾಹನವೊಂದು ಬಂದು ಡಿಕ್ಕಿ ಹೊಡೆದು ಹೋಗಿದೆ.ಬೈಕ್‌ನಲ್ಲಿ ಹೋಗುತ್ತಿದ್ದ ಶಿವಾನಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಡಿಕ್ಕಿಯ ರಭಸಕ್ಕೆ ಮೃತದೇಹ ಛಿದ್ರ ಛಿದ್ರವಾಗಿ ಬಿದ್ದಿದೆ.

ಹಿರಿಯೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

About The Author

Namma Challakere Local News
error: Content is protected !!