ಆಡು ಮುಟ್ಟದ ಸೊಪ್ಪಿಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡದ ಕೆಲಸವಿಲ್ಲ : ಎಂ ವೈ ಟಿ ಸ್ವಾಮಿ.

ತಳಕು: ಮಾ. 26. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಚಳ್ಳಕೆರೆ ತಾಲ್ಲೂಕು, ನಾಯಕನಹಟ್ಟಿ ಯೋಜನಾ ಕಛೇರಿ, ಜಗಳೂರು ಜಿಲ್ಲಾ ಕಛೇರಿ. ಪರಮಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ।। ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ.ಹೆಗ್ಗೆಡೆಯವರ ಶುಭಾಶೀರ್ವಾದದೊಂದಿಗೆ ಹೋಬಳಿಯ ಮೈಲನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗುಡಿಹಳ್ಳಿ ಕೆರೆ ಅಭಿವೃದ್ಧಿ ಸಮಿತಿ, ಗುಡಿಹಳ್ಳಿ ಮತ್ತು ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ
793 ನೇ ನಮ್ಮೂರು ನಮ್ಮಕೆರೆ ಕಾರ್ಯಕ್ರಮದ ಮೂಲಕ ಗುಡಿಹಳ್ಳಿ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಜೋತಿ ಬೆಳಗುವ ಉದ್ಘಾಟಿಸಿದರು.

ನಂತರ ಜಿಲ್ಲಾ ಜನಜಾಗೃತಿ ಸದಸ್ಯ ಎಂ ವೈ ಟಿ ಸ್ವಾಮಿ ಮಾತನಾಡಿ ಹಾಡು ಮುಟ್ಟದ ಸೊಪ್ಪಿಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸಂಸ್ಥೆ ಮಾಡದ ಕೆಲಸವಿಲ್ಲ. ನಮ್ಮ ಚಿತ್ರದುರ್ಗ ಜಿಲ್ಲೆ ಅತ್ಯಂತ ಕಡಿಮೆ ಮಳೆ ಬೀಳುವ ಭರದ ನಾಡು. ಇಲ್ಲಿನ ಜನಜಾನುವಾರುಗಳಿಗೆ ಹಾಗೂ ಬೆಳೆಗಳಿಗೆ ಮಳೆ ಆಶ್ರತರಾಗಿದ್ದೇವೆ. ಮಳೆ ಬಿದ್ದರೆ ಮಾತ್ರ ನಮಗೆ ಬೆಳೆಗಳು ಬರುತ್ತವೆ, ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಕಾಡಲ್ಲಿ ಕೆರೆ ನಿರ್ಮಿಸಿ ಪ್ರಾಣಿ ಪಕ್ಷಿಗಳಿಗೆ ಹಾಗೂ ರೈತರಿಗೆ ನೀರು ದೊರೆಯುವಂತಹ ಕೆಲಸವನ್ನು ಈ ಸಂಸ್ಥೆ ಮಾಡಿದೆ. ರಾಜ್ಯ ಸರ್ಕಾರಗಳು ಮಾಡದೇ ಇರುವಂಥ ಕೆಲಸವನ್ನು ಅತ್ಯಂತ ಕ್ರಮಬದ್ಧವಾಗಿ ಹಾಗೂ ಒಂದು ಪೈಸೆ ಹಣ ವ್ಯಯ ಆಗದ ರೀತಿ ಪಾರದರ್ಶಕವಾಗಿ ಕೆಲಸ ಮಾಡುವಂತಹ ಸಂಸ್ಥೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂಥ ಕೆಲಸಗಳನ್ನು ಈ ಸಂಸ್ಥೆ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸವಾಲಿಕರಣಗೊಂಡರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ, ಸ್ವಸಹಾಯ ಸಂಘದ ಮಹಿಳೆಯರಿಗೆ ಸಾಲ ವಿತರಿಸಿ. ಮಹಿಳೆಯರಿಗೆ ಹಾಗೂ ಅವರ ಮನೆತನಕ್ಕೆ ಹಾರ್ದಿಕ ಸಹಾಯ ನೀಡಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸವನ್ನು ಈ ಸಂಸ್ಥೆ ಮಾಡುತ್ತ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೈಲಿ ಎಂದು ಹಾರೈಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರಹಳ್ಳಿ ಬಸವ ರೆಡ್ಡಿ ಮಾತನಾಡಿ ಕೆರೆಗಳು ನಮ್ಮ ಸ್ವತ್ತು, ಅದು ಸರ್ಕಾರದ ಸುತ್ತು ಎಂದರೆ ಸರ್ಕಾರ ಎಂದರೆ ನಾವೇ. ಸರ್ಕಾರ 36 ಪೈಸೆ ವಿದ್ಯುತ್ ದರವನ್ನು ಹೆಚ್ಚಿಸಿದೆ, ಯಾಕೆಂದರೆ ವಿದ್ಯುತ್ ಅಬೋವಿರುವುದರಿಂದ ಖರೀದಿಸಲು ಅಂದರೆ ಹೆಚ್ಚಿಸಿದೆ. ನಾವುಗಳು ವಿದ್ಯುತ್ತನ್ನು ನಷ್ಟ ಮಾಡುತ್ತಿದ್ದೇವೆ ನಷ್ಟ ಮಾಡುವವರು ನಾವುಗಳು ವಿದ್ಯುತ್ ದರ ಬರಿಸುವವರು ನಾವುಗಳು ಆದ್ದರಿಂದ ಹಳ್ಳಿಯಾಗುವ ಪಟ್ಟಣಗಳಲ್ಲಿ ಹಗಲಿನಲ್ಲೇ ವಿದ್ಯುತ್ ದೀಪಗಳು ಉರಿಯುತ್ತಿರುವುದನ್ನು ನಿಲ್ಲಿಸಿದಾಗ ಮಾತ್ರ ವಿದ್ಯುತ್ ಅಭಾವ ಆಗುವುದನ್ನು ತಡೆಗಟ್ಟಬಹುದು.

ಸರ್ಕಾರ ಆದೇಶ ಹೊರಡಿಸಿದೆ ಬೆಳಗ್ಗೆ ಆಫ್ ಮಾಡಬೇಕು ಎಂದು ಆದರೆ ಹಗಲಿನಲ್ಲಿ ಬೀದಿ ದೀಪ ಉರಿದರೆ ರೀತಿ ನೋಡಿಕೊಂಡು ಪ್ರತಿ ಯೂನಿಟ್ ಇದ್ದು ವ್ಯರ್ಥವಾಗದ ರೀತಿ ಉಪಯೋಗಿಸಿಕೊಂಡಾಗ ಮಾತ್ರ ವಿದ್ಯುತ್ ದರಕ್ಕೆ ಕಡಿವಣ ಹಾಕಲು ಸಾಧ್ಯ ಎಂದು ಹೇಳಿದರು.

ಇನ್ನೂ ಸಭೆಯಲ್ಲಿ ಪ್ರಾಸ್ತಾವಿಕ ನುಡಿಯನ್ನು ಕ್ಷೇತ್ರ ಯೋಜನಾಧಿಕಾರಿ ಪಿ ಎಸ್ ಅಣ್ಣಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್, ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಬಿ ಸಿ ಟ್ರಸ್ಟ್ ಜಿಲ್ಲಾ ಕಚೇರಿ ಜಗಳೂರು ಎಸ್. ಜನಾರ್ಧನ್, ಮೈಲನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಓ.ಪಾಲಯ್ಯ, ಸದಸ್ಯರಾದ ಮಾರಣ್ಣ, ಚಿದಾನಂದರೆಡ್ಡಿ, ಕೆರೆ ಸಮಿತಿ ಗುಡಿಹಳ್ಳಿ ಟಿ. ಮಂಜುನಾಥ್, ಹರೀಶ್, ಕೃಷಿ ಅಧಿಕಾರಿ ಚಂದ್ರಶೇಖರ್, ಮೇಲ್ವಿಚಾರಕಿ ಗಿರಿಜಾ, ಗುಡಿಹಳ್ಳಿ ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ ಜಿ.ಎಸ್. ಲಕ್ಷ್ಮಿ, ಸೇರಿದಂತೆ ಸ್ವಸಾಯ ಸಂಘಗಳ ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು,

About The Author

Namma Challakere Local News
error: Content is protected !!