ಚಳ್ಳಕೆರೆ :
ನಗರಸಭೆಯ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಮಂಜುಳಾ ಪ್ರಸನ್ನ ಕುಮಾರ್, ರವರು ಮೊದಲ ದಿನವೇ ಪೌರಕಾರ್ಮಿಕರು ಸಮಸ್ಯೆಗಳನ್ನು ಆಲಿಸಿ ಅವರ ಮನೆಯಲ್ಲಿ ಊಟವನ್ನು ಸವೆಯುತ್ತಾ ಇತರರಿಗೆ ಮಾದರಿ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.
ಹೌದು ಪೌರಕಾರ್ಮಿಕರು ಎಂದರೆ ಕೇವಲ ನಗರ ಸ್ವಚ್ಚತೆ ಮಾಡುವವರು ಚರಂಡಿ ಕೊಳಚೆ ತೆಗೆಯುವವರು ಎಂಬ ತಾತ್ಸರ ಮನೋಭಾವ ತೊಡೆದು ಹಾಕಲು ನೂತನ ಅಧ್ಯಕ್ಷರ ಕಾರ್ಯವೈಖರಿ ಮುನ್ನುಡಿ ಬರೆದಿದೆ.
ಚಳ್ಳಕೆರೆ ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುಳ ಪ್ರಸನ್ನಕುಮಾರ್ ರವರು ಹಾಗು ಉಪಾಧ್ಯಕ್ಷರಾದ ಸುಮ ಭರಮಯ್ಯ ರವರು ಪೌರಕಾರ್ಮಿರಾದ ಎಂ.ಜಯಣ್ಣ ರವರ ನಿವಾಸಕ್ಕೆ ಭೇಟಿ ನೀಡಿ ಅವರ ಗೌರವಿಸಿ ಸನ್ಮಾನಿಸಿದರು.
ಹಾಗು ಪೌರಕಾರ್ಮಿಕರ ಸ್ಥಿತಿಗತಿಗಳನ್ನು ಅವಲೋಕಿಸಿ, ಜಯಣ್ಣ ರವರ ಪತ್ನಿ ನಾಗರತ್ನ ರವರ ನೀಡಿದ ಊಟವನ್ನು ಸ್ವೀಕರೀಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಮಂಜುಳಾ ಸ್ವಚ್ಚತೆ ಮತ್ತು ಆರೋಗ್ಯ ಒಂದೇ ಮುಖದ ನಾಣ್ಯ ವಿದ್ದಂತೆ ಎಲ್ಲಿ ಸ್ವಚ್ಚತೆ ಇರುತ್ತದೆಯೋ ಅಲ್ಲಿ ಭಗವಂತನ ವಾಸವಿರುತ್ತದೆ ಎಂದರು.
ಈ ಸಂಧರ್ಭದಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮದ ಸದಸ್ಯ ಡಿ.ವೆಂಕಟೇಶಚಾರ್, ನಿತಿನ್ ಕುಮಾರ್, ಇತರರು ಇದ್ದರು.,

