ಆಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಎಂ ವಿಜಯ್ ಕರೆ

ಚಳ್ಳಕೆರೆ: ದೇಶದ 20 ಕೋಟಿ ಅಸಂಘಟಿತ ಕಾರ್ಮಿಕರ ನೊಂದಾಣಿ ಇಲ್ಲದೆ ಇರುವುದು ಬೇಸರದ ಸಂಗತಿ ಎಂದು ಹಿರಿಯ ಸಿವಿಲ್ 

ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಎಂ. ವಿಜಯ್ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 

ತಾಲೂಕು ಕಾರ್ಮಿಕ ಇಲಾಖೆ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 

ಕಾರ್ಮಿಕರ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ದೇಶದಲ್ಲಿ 53 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ ಎನ್ನುವ ದಾಖಲೆ 

ಇದೆ. ಇದರಲ್ಲಿ 33 ಕೋಟಿ ಮಾತ್ರ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಿದ್ದಾರೆ. ಉಳಿದ 20 ಕೋಟಿ 

ಕಾರ್ಮಿಕರು ನೊಂದಾಣಿ ಮಾಡಿಕೊಂಡಿಲ್ಲ. ಇದರಿಂದ ಇವರಿಗೆ ಸಾಮಾಜಿಕ ಭದ್ರತೆ ಇಲ್ಲ. ಕೆಲಸ ನಿರ್ವಹಣೆಯಲ್ಲಿ ಪ್ರಾಣ ಕಳೆದುಕೊಂಡಲ್ಲಿ 

ಇಲ್ಲವೇ ಅಪಘಾತದಲ್ಲಿ ಅಂಗವಿಕಲತೆ ಆದಲ್ಲಿ ಪರಿಹಾರ ಸಿಗುತ್ತಿಲ್ಲ. ಈ ಕುಟುಂಬದ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಸಿಗುತ್ತಿಲ್ಲ. ಇಂತಹ ಅಸಂಘಟಿತ ಕಾರ್ಮಿಕರ ಬದುಕಿನ ರಕ್ಷಣೆಗೆ ಇಲಾಖೆ ನೊಂದಾಣಿ ಮೂಲಕ ಭದ್ರತೆ ಕೊಡಬೇಕು. ಸಕಾಲಕ್ಕೆ ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡಬೇಕು. ಕಾರ್ಮಿಕ ಕುಟುಂಬಗಳ 

ಮಕ್ಕಳು ಶಿಕ್ಷಣದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವ ರೀತಿ ಜಾಗೃತಿ ಮೂಡಿಸಬೇಕು. ಚಳ್ಳಕೆರೆ ತಾಲೂಕಿನಲ್ಲಿ 5 ಸಾವಿರ 

ನೊಂದಾಯಿತಿ ಕಾರ್ಮಿಕರಿದ್ದಾರೆ. ಇಲಾಖೆ ಸೌಲಭ್ಯ ಪಡೆದುಕೊಳ್ಳುವ ಮೂಲಕ ಕುಟುಂಬ ಸುಧಾರಣೆ ಮಾಡಿಕೊಳ್ಳಬೇಕು. ತಮ್ಮ ಮಕ್ಕಳ ಶಿಕ್ಷಣ ಕುಂಠಿತ ಮಾಡಬಾರದು ಎಂದು ಕಿವಿಮಾತು ಹೇಳಿದರು. 

ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಶಮೀರ್ ಪಿ. ನಂದ್ಯಾಲ್ ಮಾತನಾಡಿ, ಕಾರ್ಮಿಕ ಇಲಾಖೆ ಸೌಲಭ್ಯಕ್ಕೆ ಅರ್ಹತೆ ಇರುವ 

ಅಸಂಘಟಿತ ಕಾರ್ಮಿಕರ ನೊಂದಾಣಿಗೆ ಇಲಾಖೆ ಶ್ರಮಿಸಬೇಕು. ನೊಂದಾಯಿತ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಮತ್ತು 

ಉಚಿತ ಕಾನೂನುಗಳ ಬಗ್ಗೆ ಮಾಹಿತಿ ನೀಡಬೇಕು. ನೊಂದಾಯಿತ ಕಾರ್ಮಿಕರ ಹೆಸರಿನಲ್ಲಿ ಸಕಾಲಕ್ಕೆ ಪಿಎಫ್, ಇಎಸ್‌ಐ ಕಟ್ಟದೆ ವಂಚನೆ 

ಮಾಡಿದ್ದಲ್ಲಿ, ಕಾರ್ಮಿಕರು ನ್ಯಾಯಾಲಯದಲ್ಲಿನ ಉಚಿತ ಕಾನೂನು ಸೌಲಭ್ಯ ಪಡೆದುಕೊಂಡು ನ್ಯಾಯ ಧಕ್ಕಿಸಿಕೊಳ್ಳಬೇಕು. ದೇಶದ ಅಭಿವೃದ್ದಿಗಾಗಿ ಅಪಾಯದ ಕಾಮಗಾರಿಗಳಲ್ಲಿದುಡಿಯುವ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ವಂಚನೆ ಆಗಬಾರದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಎಚ್.ಆರ್. ಹೇಮಾ, ಬಿ.ಆರ್. ಪುನೀತ್, ತಾಪಂ ಎಚ್. 

ಶಶಿಧರ, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಅನಿಲ್ ಬಾಲಚಂದ್ರ ಬಗಟಿ, 

ತಾಲೂಕು ಕಾರ್ಮಿಕ ಇಲಾಖೆ ನಿರ್ದೇಶಕಿ, ಟಿ. ಕುಸುಮಾ, ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ನಾಗರಾಜ್, ಮುಖಂಡರಾದ ಸಿ.ವೈ. 

ಶಿವರುದ್ರಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಎಂ.ಎಚ್. ಸ್ವಾಮಿ, ರೇಖಾ, ನಗೀನಾ, ಎಂ. ಶೇಖರಪ್ಪ, ದಾದಪೀರ್, ಅಜ್ಜಣ್ಣ ಮತ್ತಿತರರಿದ್ದರು.

About The Author

Namma Challakere Local News
error: Content is protected !!