ಶ್ರೀ ಹಟ್ಟಿ ತಿಪ್ಪೇಶನ ಪರಮ ಭಕ್ತರಾಗಿದ್ದ ದಾವಣಗೆರೆ ಧಣಿ ಶಾಮನೂರು ಶಿವಶಂಕ್ರಪ್ಪ.
ನಾಯಕನಹಟ್ಟಿ:: ಐತಿಹಾಸಿಕ ಮದ್ಯ ಕರ್ನಾಟಕದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಪರಮ ಭಕ್ತರಾಗಿದ್ದ ಶಾಮನೂರು ಶಿವಶಂಕರಪ್ಪ. ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಎಚ್ ಗಂಗಾಧರಪ್ಪ ಹೇಳಿದರು.
ಸೋಮವಾರ ಪಟ್ಟಣದ ಒಳ ಮಠದ ದಾಸೋಹ ಮಂಟಪದಲ್ಲಿ ದಾವಣಗೆರೆ ಧಣಿ ಶಾಮನೂರು ಶಿವಶಂಕರಪ್ಪ ರವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂತಾಪ ಸೂಚಿಸಿ ಮಾತನಾಡಿದ ಅವರು ಚಾಮನೂರು ಶಿವಶಂಕರಪ್ಪನವರು ನಿನ್ನ ಸಂಜೆ 6:25ಕ್ಕೆ ನಿಧನರಾಗಿದ್ದಾರೆ ಅವರ ಆತ್ಮಕ್ಕೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಚಿರಶಾಂತಿ ಕೊಡಲಿ.
ಶಾಮನೂರು ಶಿವಶಂಕ್ರಪ್ಪನವರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಪ್ರತಿ ವರ್ಷ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರಾ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠ ಮತ್ತು ಹೊರಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಹೋಗುತ್ತಿದ್ದರು.
ಒಳಮಠದ ದೇವಾಲಯದ ಪಕ್ಕದಲ್ಲಿ ದಾಸೋಹ ಮಂಟಪ ಹಾಗೂ ವೇದ ಶಾಲಾ ಕೊಠಡಿ ಮತ್ತು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಉತ್ಸವ ಮೂರ್ತಿಗೆ ಬಂಗಾರದ ಮುಖ ಕವಚ 800. ಗ್ರಾಂ, ಮತ್ತು ಬೆಳ್ಳಿ ಮಂಟಪ ಹೊರಮಠದ ದ್ವಾರಬಾಗಿಲು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ದೇವರು ಶಾಮನೂರು ಶಿವಶಂಕ್ರಪ್ಪನವರ ಕುಟುಂಬಕ್ಕೆ ಶಾಂತಿ ಮತ್ತು ನೆಮ್ಮದಿ ನೀಡಲಿ ಎಂದರು
ಇದೇ ವೇಳೆಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿಗಳಾದ ಮನು,ಪ್ರಕಾಶ್, ಮಹದೇವ, ಮಂಜುನಾಥ್, ಶಿವರಾಜ್, ಶಿವಕುಮಾರ್ ಭಂಡಾರಿ, ಮಹಾಂತೇಶ್, ಹಾಗೂ ಗ್ರಾಮದ ಕಾಂತರಾಜ್ ಮಂಜುಳಾ ಸೇರಿದಂತೆ ಭಕ್ತರು ಇದ್ದರು

