ಚಳ್ಳಕೆರೆ :ಶಿಮುಲು ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಸಿಗುವ ಸೌಲಭ್ಯಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳವುದರ ಮೂಲಕ ಆರ್ಥಿಕವಾಗಿ ಸಬಲರಾಗಿ ಎಂದು ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಬಿಸಿ.ಸಂಜೀವಮೂರ್ತಿ ಹೇಳಿದರು.

ಅವರು
ಮೊಳಕಾಲ್ಮುರು ತಾಲೂಕು ಕೆರೆಕೊಂಡಾಪುರ ಗ್ರಾಮದಲ್ಲಿ ಲಿಂಗ ತಾರತಮ್ಯ ಹಾಗೂ ಕಾನೂನು ಅರಿವು ಅಡಿಯಲ್ಲಿ ಇಲ್ಲಿನ ಮಹಿಳಾ ಸಹಕಾರ ಸಂಘ ಹಾಲು ಉತ್ಪಾದಕರ ಸಂಘಕ್ಕೆ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಕ್ಷೀರ ಸಂಜೀವಿನಿ ಯೋಜನೆ ಅಡಿಯಲ್ಲಿ ಶಿಮುಲ್ ಶಿವಮೊಗ್ಗ ವತಿಯಿಂದ 14 ಜನ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದರು,

ಒಕ್ಕೂಟದಲ್ಲಿ ಸಿಗುವ ಸೌಲಭ್ಯಗಳನ್ನು ಎಲ್ಲಾ ಮಹಿಳೆಯರೆ ಬಳಸಿಕೊಂಡು ಸಹಕಾರ ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದರು‌

ಇನ್ನೂ ಒಕ್ಕೂಟದ ಉಪ ವ್ಯವಸ್ಥಾಪಕರಾದ ದೀಪಿಕಾ ಮಾತನಾಡಿ, ಮಹಿಳಾ ಸಂಘಗಳಿಗೆ ಒಕ್ಕೂಟದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಸಂಘದ ಸದಸ್ಯರು ಮಾಹಿತಿ‌ಪಡೆದು ನಿರ್ದೇಶಕರ ಶಿಪರಾಸಿನ ಮೂಲಕ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕಾನೂನಿನ ಸಲಹೆಗಾರರಾದ ಬೋರಯ್ಯ, NGO ಕಾರ್ಯಕರ್ತರು ಆರ್. ಗಾಯತ್ರಿ ಮತ್ತು ಮಾರ್ಗ ವಿಸ್ತರಣಾಧಿಕಾರಿಗಳಾದ. ಎಸ್. ಜಿ. ಕೃಷ್ಣಕುಮಾರ್, ಸಂಘದ ಅಧ್ಯಕ್ಷರಾದ ಗಂಗಮ್ಮ, ಕಾರ್ಯದರ್ಶಿ ಅನ್ನಪೂರ್ಣ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!