ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟದ ಸ್ಪೋಟಕ ವಸ್ತುಗಳ ಶೇಖರಣ ಕೇಂದ್ರ.

ಚಳ್ಳಕೆರೆ ತಾಲೂಕಿ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಾರಹಟ್ಟಿ ಸಮೀಪ ಇರುವ ಶ್ರೀರಾಮ್ ಇನ್ ಫ್ರಾಸ್ಟ್ರಕ್ಟರ್ಸ ಮತ್ತು ಕಿಶನ್ ಲಾಲ್ ಸುಕುದ್ದೇವ್ ಗುರ್ಜರ್ ಎನ್ನುವ ಕಂಪನಿ ಸಿಡಿಮದ್ದು ವಸ್ತುಗಳನ್ನು ಸಂಗ್ರಹ ಮಾಡಿ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ . ಕಾಂಪೌಂಡ್ ಸುತ್ತ ನಾಮಫಲಕಗಳಿಲ್ಲ. ದೀಪಗಳಿಲ್ಲ, ಮುಖ್ಯವಾಗಿ ಸಿಸಿ ಕ್ಯಾಮೆರಾ ಗಳೇ ಇಲ್ಲ. ಅಲ್ಲದೆ ಗ್ರಾಮ ಪಂಚಾಯಿತಿಗೆ ಸುಮಾರು ಮೂರು ವರ್ಷದ ಸುಮಾರು 6 ಲಕ್ಷ ರೂಪಾಯಿ ತೆರಿಗೆ ಕಟ್ಟಿಲ್ಲ. ಇದನ್ನ ಗ್ರಾಮ ಪಂಚಾಯತಿಯವರು ಪ್ರಶ್ನೆ ಮಾಡಿದರೆ ಇದಕ್ಕೆ ಉತ್ತರವಿಲ್ಲ

ಈಗಾಗಲೇ ಗ್ರಾಮ ಪಂಚಾಯತಿಯಿಂದ ಹಲವಾರು ಬಾರಿ ನೋಟಿಸ್ ನೀಡಲಾಗಿದ್ದು. ಗ್ರಾಮಸ್ಥರು ಸಹ ಈ ವಿಚಾರ ಕುರಿತಂತೆ ಗ್ರಾಮ ಪಂಚಾಯಿತಿಗೆ ಸ್ಪೋಟಕ ತುಂಬಿರುವ ಬಂಕರ್ ಬಗ್ಗೆ ಆತಂಕ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ.

ಇಲ್ಲಿ ವಿದ್ಯುತ್ತು ಸಹ ಅಕ್ರಮವಾಗಿ ಯಾಕೆ ಮಾಡಿಕೊಂಡಿದ್ದರು ಇದನ್ನು ಅಧಿಕಾರಿಗಳು ಪ್ರಶ್ನೆ ಮಾಡಿ ನೋಟಿಸ್ ಕಳಿಸಿದ ಕಾರಣ ಅವರಿಗೆ ವಿದ್ಯುತ್ ಸೂಲ್ಕವನ್ನು ಕಟ್ಟಲು ಮುಂದಾಗಿದ್ದಾರೆ.

ಸ್ಪೋಟಕ ವಸ್ತುಗಳ ಶೇಖರಣ ಘಟಕ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿ.ಬಿ.ರಾಜಣ್ಣ,ಪಿಐ ಆರ್ ಎಫ್ ದೇಸಾಯಿ ಗ್ರಾಮ ಪಂಚಾಯತಿ ಸದಸ್ಯ ದೊರೆ ಬೈಯಣ್ಣ ಹಾಗೂ ಪಿ ಡಿ ಓ ಇನಾಯಿತ್ ಭಾಷ, ಮುಖಂಡ ರಾಜಣ್ಣ ಭೇಟಿ ನೀಡಿ ಸುರಕ್ಷತಾ ನೀಡಿ ಪರಿಶೀಲ ನಡೆಸಿದರು.

ನನ್ನವಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಇನಾತ್ ಭಾಷ, ಪಂಚಾತಿ ವ್ಯಾಪ್ತಿಯ ವಿವಿಧ ಗ್ರಾಮಸ್ಥರು ಹಾಗೂ ಕುರಿಗಾಹಿಗಳು ಸ್ಪೋಟಕ ವಸ್ತುಗಳ ಶೇಖಡ ಕೇಂದ್ರ ವಿಚಾರವಾಗಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಈ ಕಂಪನಿಯವರಿಗೆ ಗ್ರಾಮ ಪಂಚಾಯತಿಯಿಂದ ನೋಟಿಸ್ ಕಳಿಸಿದರು ಉತ್ತರ ನೀಡುತ್ತಿಲ್ಲ ತೆರಿಗೆ ಮೂರು ವರ್ಷದ 6 ಲಕ್ಷ ಹಣವನ್ನು ತೆರೆಗೆ ರೂಪದಲ್ಲಿ ಗ್ರಾಮ ಪಂಚಾಯತಿಗೆ ಕಟ್ಟಬೇಕು ಆದರೆ ಕಂಪನಿ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕಂಪನಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದರು..

About The Author

Namma Challakere Local News
error: Content is protected !!