“ಶ್ರದ್ಧೆಯಿಂದ ಕೂಡಿದ ಪ್ರಾರ್ಥನೆಗೆ ಭಗವಂತನ ದರ್ಶನ ಸಾಧ್ಯ”-ಯತೀಶ್ ಎಂ ಸಿದ್ದಾಪುರ ಅನಿಸಿಕೆ.

ಚಳ್ಳಕೆರೆ-ಶ್ರದ್ಧೆಯಿಂದ ಕೂಡಿದ ಪ್ರಾರ್ಥನೆಗೆ ಭಗವಂತನ ದರ್ಶನ ಸಾಧ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಹಾಗೂ ಲೇಖಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ಪಂಕಜ ಚೆನ್ನಪ್ಪ ಅವರ ವಿದ್ಯಾಶ್ರೀ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಶ್ರೀಶಾರದಾದೇವೀ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಉಪನ್ಯಾಸ ನೀಡಿದರು.

       ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಾರಾಯಣ, ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಂಕಜ ಚೆನ್ನಪ್ಪ,ಅಕ್ಷಯ, ಜಯಮ್ಮ ನರಸಿಂಹಮೂರ್ತಿ, ತಿಪ್ಪಮ್ಮ ಉಮಾಶಂಕರ್, ಗೀತಾ ಸುಂದರೇಶ್ ದೀಕ್ಷಿತ್, ಸೌಮ್ಯ ಪ್ರಸಾದ್, ಸರ್ವಮಂಗಳ ಶಿವಣ್ಣ,ರಾಧಾ, ಶ್ವೇತ ರವಿಚಂದ್ರ, ತ್ರಿವೇಣಿ, ದೇವಿರಮ್ಮ, ಮುಕ್ತಾಂಬಾ ಸೇರಿದಂತೆ ಸದ್ಭಕ್ತರು ಹಾಜರಿದ್ದರು.

About The Author

Namma Challakere Local News
error: Content is protected !!