ಚಳ್ಳಕೆರೆ ‌:

ಆಶ್ರಿತ ಸಂಸ್ಥೆ ಚಿತ್ರದುರ್ಗ ಪ್ರಸಕ್ತ ಸಾಲಿನ ಕಾರ್ಯ ಚಟುವಟಿಕೆಗಳ ಬಿತ್ತಿ ಚಿತ್ರಗಳನ್ನು ಚಳ್ಳಕೆರೆ ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ರವರು ಬಿಡುಗಡೆ ಮಾಡಿದರು.

ಚಳ್ಳಕೆರೆ ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಮುಕ್ತ ತಾಲ್ಲೂಕಾಗಿಸಲು ಇಲಾಖೆಯ ಅಧಿಕಾರಿಗಳ ಜತೆಗೆ ಸಮುದಾಯದ ಪ್ರಜ್ಞಾವಂತರು ಕೈ ಜೋಡಿಸಬೇಕೆಂದು ತಿಳಿಸಿದರು.

ಅಶ್ರಿತ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಸ್. ನಾಗರಾಜ್ ಮಾತನಾಡಿ ನಮ್ಮ ಸಂಸ್ಥೆಯು ತೆಲಂಗಾಣದ ಹೈದರಾಬಾದ್ ಮಹಾ ನಗರ ಮತ್ತು ನಲಗೊಂಡ, ರಂಗಾರೆಡ್ಡಿ, ಮೇಡ್ ಚಲ್ ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದೆ ಅತೀ ಮುಖ್ಯವಾಗಿ ಬಾಲ್ಯ ವಿವಾಹ, ಬಾಲ ಕಾರ್ಮಿಕ, ಮಕ್ಕಳ ಲೈಂಗಿಕ ಶೋಷಣೆಯ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಕಾನೂನು ನೆರವು ನೀಡಲಾಗುತ್ತಿದೆ.

ಈ ದಿಸೆಯಲ್ಲಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕತೆಯನ್ನು ತೊಡೆದು ಹಾಕುವ ಸಂಕಲ್ಪದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆಗಳ ಸಹ ಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಲು ಮುಂದಾಗಿದ್ದು ಈ ಮಹತ್ತರ ಕಾರ್ಯದಲ್ಲಿ ನಮ್ಮೊಂದಿಗೆ ಸ್ಥಳೀಯ ಆಡಳಿತವು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಡಿ.ಡಿ.ಪಿ.ಐ. ಮಂಜುನಾಥ್, ತಾ.ಪಂ. ಇ.ಒ. ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಆಶ್ರಿತ ಸಂಸ್ಥೆ ಜಿಲ್ಲಾ ಸಮನ್ವಯಕ ಡಿ.ಒ. ಮುರಾರ್ಜಿ, ತಾಲ್ಲೂಕು ಸಂಯೋಜಕಿ ದೇವೀರಮ್ಮ, ಮೊಳಕಾಲ್ಮೂರು ಸಂಯೋಜಕ ಅಜ್ಜೇರಿ ತಿಪ್ಪೇಸ್ವಾಮಿ, ಚಿತ್ರದುರ್ಗ ಸಂಯೋಜಕ ಹರ್ಷವರ್ಧನ, ಜಿಲ್ಲಾ ಸಹಾಯಕ ಚಂದ್ರಣ್ಣ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!