ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಬುಡಕಟ್ಟು ಜನರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗುವುದಾ..!
ನೀರಿನಲ್ಲಿ ಮುಳುಗಿದ ರಸ್ತೆಯಲ್ಲಿ ಓರ್ವ ಮಹಿಳೆ ಪ್ರಾಣ ತೆತ್ತಳಾ..
ಬ್ರಿಡ್ಜ್ ಕಂ ಬ್ಯಾರೇಜ್ ಗೆ ಹಸ್ತು ಎನ್ನುವರಾ..! ಸ್ಥಳೀಯ ಶಾಸಕ ಟಿ.ರಘುಮೂರ್ತಿ
ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಕುತ್ತು ಶಿಕ್ಷಣ ಇಲಾಖೆ ಮೌನ
ಚಳ್ಳಕೆರೆ : ಕೊಂಚ ಯಾಮಾರಿದರೆ ಜೀವಕ್ಕೆ ಕಂಟಕ. ಹೌದು ಇದು ಚಳ್ಳಕೆರೆ ತಾಲೂಕಿನ ಬುಡಕಟ್ಟು ಸಮುದಾಯವೇ ಹೆಚ್ಚು ವಾಸಿಸುವ ನನ್ನಿವಾಳ ಗ್ರಾಮದ ಜನರ ನೋವಿನ ಮಾತಾಗಿದೆ.
ನನ್ನಿವಾಳ ಕೆರೆ ಹಿನ್ನಿರಿನ ಸಮೀಪ ಹಾದುಹೊದ ರಸ್ತೆ ಸಂಪೂರ್ಣವಾಗಿ ನೀರಿನಿಂದ ಮುಳುಗಿ ಹೊಗಿದೆ, ನನ್ನಿವಾಳ ಮಾರ್ಗದಿಂದ ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಗ್ರಾಮದ ಸುತ್ತಲಿನ ಹತ್ತು ಹಳ್ಳಿಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ, ಇನ್ನೂ ರಾಮಜೋಗಿಹಳ್ಳಿ, ಕುರುಡಿಹಳ್ಳಿಗೆ ಈದೇ ರಸ್ತೆಯಲ್ಲಿ ಗ್ರಾಮದ ಜನರು ಅವಂಲಬಿಸಿದ್ದಾರೆ, ಕೇವಲ ಐದು ಕಿ.ಮೀ ದೂರ ಕ್ರಮಿಸಿದರೆ ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆ ಸಿಗಲಿದೆ, ಇದರಿಂದ ಈ ಭಾಗದ ನೂರಾರು ಕೃಷಿ ಕುಟುಂಬಗಳಿಗೆ ರಸ್ತೆ ಅವಶ್ಯಕತೆ ಇದ್ದು, ರಾತ್ರಿವೇಳೆಯಂತು ಈ ಭಾಗದ ಕೃಷಿ ಅವಲಂಬಿತ ಕುಟುಂಬಗಳ ಗೋಳು ಕೇಳಬಾರದಾಗಿದೆ,
ಇನ್ನೂ ಇದೇ ರಸ್ತೆ ಮಾರ್ಗವಾಗಿ ಎರಡು ಕುಟುಂಬಗಳು ಜೀವನ ಕಟ್ಟಿ ಕೊಂಡಿದ್ದಾರೆ, ನೀರಿನಲ್ಲಿ ಮುಳುಗಿದ ರಸ್ತೆಯಲ್ಲಿ ಶಾಲೆಗೆ ಮಕ್ಕಳು ಆಗಮಿಸಬೇಕಿದೆ, ಇನ್ನೂ ಆಂಬ್ಯೂಲೆನ್ಸ್, ಕೂಡ ಇದೆ ಮಾರ್ಗವಾಗಿ ಸಂಚರಿಸಬೇಕಿದೆ, ಆದ್ದರಿಂದ ಈ ಭಾಗದ ಕೃಷಿ ಕುಟುಂಬಗಳ ರಕ್ಷಣೆಗೆ, ಹಾಗೂ ಶಾಲಾ ಮಕ್ಕಳ ಹಿತ ದೃಷ್ಟಿಯಿಂದ ಸ್ಥಳೀಯ ಶಾಸಕರು, ಅಧಿಕಾರಿ ವರ್ಗದವರು ಇತ್ತ ಕಡೆ ದಾವಿಸಿ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂಬುದು ಇಲ್ಲಿನ ಜನರ ಆಂಕ್ರದನದ ಮಾತಾಗಿದೆ.
ಕಾಲುಜಾರಿ ಜೀವ ಕಳೆದುಕೊಂಡ ಮಹಿಳೆ :
ಕಳೆದ ಜನವರಿ ಮಾಸದಲ್ಲಿ ಕೃಷಿ ಕೆಲಸಕ್ಕೆಂದು ಈದೇ ಮಾರ್ಗದಲ್ಲಿ ನಡೆದುಕೊಂಡು ಹೋಗುವಾಗ ಆಯಾತಪ್ಪಿ ನೀರಿನಲ್ಲಿ ಬಿದ್ದು ಜೀವ ಕಳೆದುಕೊಂಡಿರುವ ಪಾರ್ವತಮ್ಮ(55 ) ವರ್ಷದ ಮಹಿಳೆಯ ನಿದರ್ಶನಗಳಿವೆ. ಈಗೆ ಈ ಭಾಗದ ಜನರ ರಕ್ಷಣೆಗೆ ಸ್ಥಳೀಯ ಶಾಸಕರು ದಾವಿಸಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.
ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣ :
ಈ ಭಾಗದಲ್ಲಿ ಕೃಷಿ ಭೂಮಿಯನ್ನೆ ಹೆಚ್ಚಾಗಿ ಅವಲಂಬಿಸಿದ ಇಲ್ಲಿನ ಬುಡಕಟ್ಟು ಸಮುದಾಯಗಳಿಗೆ ನೀರಿನ ಆಶ್ರಯ ಮೂಲ ಪ್ರಮುಖವಾಗಿದೆ, ಆದ್ದರಿಂದ ಈ ಭಾಗದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದರೆ ಕೃಷಿ ಪ್ರದೇಶದ ರೈತರಿಗೆ ಹಾಗೂ ರಸ್ತೆ ಸಂಚಾರಕ್ಕೆ ಅನುಕೂಲವಾಗಲಿದೆ,
ಬ್ರಿಡ್ಜ್ ಕಂ ಬ್ಯಾರೇಜ್ ಗೆ ಹಸ್ತು ಎನ್ನುವರಾ..! ಸ್ಥಳೀಯ ಶಾಸಕ ಟಿ.ರಘುಮೂರ್ತಿ
ಹೇಳಿಕೆ :
ಕಳೆದ ಮೂವತ್ತರಿಂದ ನಲವತ್ತು ವರ್ಷಗಳಿಂದ ಈದೇ ರಸ್ರೆ ಮಾರ್ಗದಲ್ಲಿ ಕೃಷಿಯನ್ನೆ ಜೀವಳವಾನ್ನಿಗಿಸಿಕೊಂಡು ರಾತ್ರಿ ಹಗಲು ಎನ್ನದೆ ಓಡಾಡುತ್ತಿದ್ದೆವೆ, ಆದರೆ ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ನಿಂತಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವುದು ಕಷ್ಟಸಾಧ್ಯ, ಆದ್ದರಿಂದ ಶಾಸಕರು ಈ ಭಾಗದ ಜನರ ರಕ್ಷಣೆಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿದರೆ ಅನುಕೂಲವಾಗಲಿದೆ.– ದ್ಯಾಮಣ್ಣ ಸ್ಥಳೀಯ ನಿವಾಸಿ
ಹೇಳಿಕೆ :
ಈ ರಸ್ತೆ ಮಾರ್ಗದ ಒಂದು ಕಿ.ಮಿ. ದೂರದಲ್ಲಿರುವ ನಮ್ಮ ಕುಟುಂಬಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳು ಇದ್ದಾರೆ, ಆರೋಗ್ಯ ಸಮಸ್ಯೆ ಆದರೆ ಇದೇ ಮಾರ್ಗದಲ್ಲಿ ಆಂಬ್ಯೂಲೇನ್ಸ್ ಸಂಚರಿಸಬೇಕಿದೆ, ಈಗೆ ಕತ್ತಲಲ್ಲಿ ಜೀವಿ ಸವಿಸುತ್ತಿದ್ದೆವೆ, ಸರಕಾರ ಇತ್ತ ಕಡೆ ದಾವಿಸಬೇಕು, ಜಿಲ್ಲಾಡಳಿತ, ತಾಲೂಕು ಆಡಳಿತ ನಮ್ಮ ಬುಡಕಟ್ಟು ಜನರ ರಕ್ಷಣೆಗೆ ದಾವಿಸಬೇಕು ರಸ್ತೆ ನಿರ್ಮಿಸಿಕೊಂಡಬೇಕು.–ಕೊಲ್ಲಣ್ಣ ರೈತ ಮುಖಂಡ
ಹೇಳಿಕೆ :
ನನ್ನಿವಾಳ ಭಾಗದ ಹಿನ್ನೀರು ಪ್ರದೇಶದಲ್ಲಿ ಹಾದುಹೊದ ರಸ್ತೆ ನೀರಿನಿಂದ ಸಂಪೂರ್ಣವಾಗಿ ಜಲಾವೃತವಾಗಿ, ಶಾಲಾ ಮಕ್ಕಳಿಗೆ, ಅಂಬ್ಯೂಲೆನ್ಸ್ ಗೆ , ರೈತ ಕೃಷಿ ಕುಟುಂಬಗಳಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ ಈ ಕೂಡಲೇ ಪರೀಶಿಲನೆ ನಡೆಸಿ ಸೂಕ್ತ ಕ್ರಮವಹಿಸಲಾಗುವುದು..–
ಟಿ.ವೆಂಕಟೇಶ್ ಜಿಲ್ಲಾಧಿಕಾರಿ ಚಿತ್ರದುರ್ಗ.
ಪೋಟೋ :1. ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಬುಡಕಟ್ಟು ಜನರು ತಮ್ಮ ಬಂಡಿಯಲ್ಲಿ ಕುರಿ, ಎಮ್ಮೆ ಸಾಗಿಸುತ್ತಿರುವ ದೃಶ್ಯ.
ಪೋಟೋ : 2.ಚಳ್ಳಕೆರೆ ತಾಲೂಕಿನ ನನ್ನಿವಾಳದ ಜನರು ಹಿನ್ನೀರಿನ ಪ್ರದೇಶದ ರಸ್ತೆ ಮಾರ್ಗದಲ್ಲಿ ಕೃಷಿ ಜಮೀನುಗಳಿಗೆ ತೆರುಳುತ್ತಿರುವುದು.

