“ಶ್ರೀರಾಮಕೃಷ್ಣರಲ್ಲಿ ಬಾಲಗೋಪಾಲನನ್ನು ಕಂಡ ಸಾಧಕಿ ಅಘೋರಮಣಿ ದೇವಿ”:-ಶ್ರೀಮತಿ ಸುಧಾಮಣಿ. ಚಳ್ಳಕೆರೆ:- ಶ್ರೀರಾಮಕೃಷ್ಣರಲ್ಲಿ ಬಾಲಗೋಪಾಲನನ್ನು ಕಂಡ ಆಧ್ಯಾತ್ಮಿಕ ಸಾಧಕಿ ಅಘೋರಮಣಿ ದೇವಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಸುಧಾಮಣಿ ಅಮರನಾಥ ಗುಪ್ತ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-2″ರ ಗ್ರಂಥ ಪಾರಾಯಣ ಮಾಡುತ್ತ “ಆಡಿಸಿದಳೆಶೋಧಾ”.. ಅಧ್ಯಾಯವನ್ನು ಓದಿದರು. ಸತ್ಸಂಗದ ಅಂಗವಾಗಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಠಣ,
ಶ್ರೀಮತಿ ಎಂ ಗೀತಾ ನಾಗರಾಜ್ ಅವರಿಂದ ಶಿವನ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ,ಆರತಿ ನಡೆಯಿತು. ಕಾರ್ಯಕ್ರಮದಲ್ಲಿ ಕವಿತಾ ಗುರುಮೂರ್ತಿ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಅಂಬುಜಾ ಶಾಂತಕುಮಾರ್, ವೆಂಕಟಲಕ್ಷ್ಮೀ, ಜಿ.ಯಶೋಧಾ ಪ್ರಕಾಶ್, ನಾಗರಾಜ್,ಯತೀಶ್ ಎಂ ಸಿದ್ದಾಪುರ, ಚೇತನ್, ಪುಷ್ಪಲತಾ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!