ದೀವಳಿಗೆ ಹಬ್ಬದಲ್ಲಿ ಮೇಳೈಸಿದ ಬುಡಕಟ್ಟು ಸಂಸ್ಕೃತಿ

ಮೊಳಕಾಲ್ಮುರು:-ತಾಲೂಕಿನ ಚಿಕ್ಕೋಬನಹಳ್ಳಿ  ಗ್ರಾಮದ ಪರಿಶಿಷ್ಟರ ಕಾಲೋನಿಯು ಬುಡಕಟ್ಟು ಸಂಸ್ಕೃತಿಗೆ ತಳಕು ಹಾಕಿಕೊಂಡಿದೆ.ಈ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯುವ
ಶ್ರೀ ಕಂಚೋಬಳೇಶ್ವರ ದೇವರ ದೀವಳಿಗೆ ಹಬ್ಬವು   ವಿಶೇಷವೆನಿಸುತ್ತದೆ.

ದೀವಳಿಗೆ ಹಬ್ಬದ ಪ್ರಯುಕ್ತ ಚಿಕ್ಕೋಬನಹಳ್ಳಿ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಚಿಕ್ಕೋಬನಹಳ್ಳಿ,
ಚಳ್ಳಕೆರೆ ತಾಲೂಕಿನ ಚೌಳಕೆರೆ,(ಅಬ್ಬೇನಹಳ್ಳಿ) ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದ ಮೂರು ಅಜ್ಜನವರ ಮುಂದಾಳತ್ವದಲ್ಲಿ ದೇವಸ್ಥಾನದ ಕಾರ್ಯಕ್ರಮಗಳು ಜರುಗುತ್ತವೆ.

ತಾಲೂಕಿನ
ಚಿನ್ನ ಹಗರಿ ದಂಡೆಯುದ್ದಕ್ಕೂ ಬುಡಕಟ್ಟು ಸಂಸ್ಕೃತಿಯ ಚಹರೆಗಳು ಧಾರ್ಮಿಕ ನಂಬಿಕೆಗಳು ಮನೆ ಮಾಡಿದ್ದು ಇದಕ್ಕೆ ಸಾಕ್ಷಿ ಎಂಬಂತೆ ವಿಜಯನಗರ ಜಿಲ್ಲೆಯ ಗಡಿ ಗ್ರಾಮ ಹುಡೇಂನಿಂದ ಹೂವಿನ ಬುಟ್ಟಿ ಬರುವುದರ ಜೊತೆಗೆ ದೇವರನ್ನು ಗಂಗೆಗೆ ಕರೆದುಕೊಂಡು ಹೋಗಿ ಸಿಂಗರಿಸಿಕೊಂಡು  ಪುರ ಪ್ರವೇಶ ಮಾಡುವರು. ಅಂದಿನಿಂದ  ಎಲೆಪೂಜೆ. ರಾತ್ರಿ ಭಜನೆ ಪೂಜಾರಿ ಮತ್ತು ದಾಸರಾಯಗಳಿಂದ ಒಂಬತ್ತು ಪೂಜೆಗಳು, ಹಾಗೂ
ಪಟ್ಟದ ದಾಸರಯ್ಯ ಸಮ್ಮುಖದಲ್ಲಿ ಮಣೇವು ಕಾರ್ಯಕ್ರಮ ನಡೆದು ಭಕ್ತರಿಗೆ ಪ್ರಸಾದ ರೂಪದಲ್ಲಿ ಬೆಲ್ಲವನ್ನು ಹಂಚಿ ಸಂಭ್ರಮಿಸಲಾಯಿತು.

ಬುಡಕಟ್ಟುವೀರರಾದ ಕಂಪಳರಂಗ,ಜಗಳೂರು ಪಾಪ ನಾಯಕ,ಗಾದ್ರಿ ಪಾಲನಾಯಕರಂತೆ ಕೆಂಚೋಬಳೇಶ್ವರ ಕೂಡ ಬುಡಕಟ್ಟುವೀರ ಎಂಬುದು ಇಲ್ಲಿಯ ಜನರ ನಂಬಿಕೆ.

About The Author

Namma Challakere Local News
error: Content is protected !!