ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆದು ದೇಶದ ಮುಸ್ಲಿಮರಿಗೆ ನ್ಯಾಯ ದೊರಕಿಸಲಿ: ಹೆಚ್ ಎಸ್ ಸೈಯದ್
ಚಳ್ಳಕೆರೆ: ದೇಶದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸಹೋದರತೆಯ ಜೀವನ ನಡೆಸುತ್ತಿದ್ದು ವಕ್ಫ್ ಮಸೂದೆಯಿಂದಾಗಿ ದೇಶದ ಹಲವಾರು ಕಡೆಗಳಲ್ಲಿ ಮುಸ್ಲಿಂ ಬಾಂಧವರು ಪ್ರತಿಭಟನೆಗಳನ್ನು ನಡೆಸಿದ್ದಾರೆ ಆದ್ದರಿಂದ ಇದನ್ನು ಪ್ರಧಾನಿ ಮೋದಿಯವರು ಪುನರ್ ಪರಿಶೀಲನೆ ನಡೆಸುವಂತೆ ತಾಲೂಕು ಭಾರತೀಯ ರಾಷ್ಟ್ರೀಯ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.
ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡ ಎಚ್ಎಸ್ ಸೈಯದ್ ವಕ್ ಮಸೂದೆ ಈಗಾಗಲೇ ರಾಷ್ಟ್ರಪತಿಗಳಿಂದ ಅಂಕಿತ ಪಡೆದು ಮಸೂದೆಯಾಗಿ ಮಾರ್ಪಟ್ಟಿದೆ ಈ ಮಸೂದೆಯ ವಿರುದ್ಧ ದೇಶಾದ್ಯಂತ ಮುಸ್ಲಿಮರು ಪ್ರತಿಭಟಗಳನ್ನು ನಡೆಸುತ್ತಿದ್ದು ಮಸೂದೆ ವಿರುದ್ಧವಾಗಿ ಕೆಲವು ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ. ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಸಿಆರ್ ಅಲ್ಲಭಕ್ಷಿ ಎಂ ದಾದಾಪೀರ್ ಮೊಹಮ್ಮದ್ ಅನ್ವರ್ ಬಶೀರ್ ಹಯಾತ್ ಎಸ್ ಮುಜೀಬ್ ಉಲ್ಲ ಮಾರ್ಬಲ್ ಸಲೀಂ ಖಲೀಮ್ ಉಲ್ಲಾ ಮೊಹಮ್ಮದ್ ಯೂನಸ್ ಮೊಹಮ್ಮದ್ ರಫಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

