ಚಳ್ಳಕೆರೆ :
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಯ , ವಿಶೇಷ ಸಭೆಯನ್ನು, ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು,,
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿಗಳಾದ ,ಕೆ ಎನ್ ದೊಡ್ಡೆಟ್ಟೆಪ್ಪ,ಭೀಮನಕೆರೆ ಶಿವಮೂರ್ತಿ ,ನವೀದ್ ಚಿತ್ರದುರ್ಗ,ಜಿಲ್ಲಾ ಸಂಯೋಜಕರಾದ ಮಹಾಂತೇಶ್ ಕೂನಬೇವು, ಮಾನ್ಯ ಜಿಲ್ಲಾಧ್ಯಕ್ಷರಾದ ಎನ್ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತರಾಯ ಓ, ಚಳ್ಳಕೆರೆಯ ಜಯಣ್ಣ,ಗೋವಿಂದಪ್ಪ, ಹೊಸದುರ್ಗ ಮಂಜು ಚಿತ್ರದುರ್ಗ ತಾಲ್ಲೂಕು ಉಪಾಧ್ಯಕ್ಷರಾದ ದೀಪಾರವರು ಉಪಸ್ಥಿತರಿದ್ದರು,,,
ಸಭೆಯಲ್ಲಿ ತೀರ್ಮಾನಿಸದಂತೆ ಪ್ರತಿತಿಂಗಳು 1ನೇತಾರೀಖು ಜಿಲ್ಲಾ ಸಮಿತಿ ಸಭೆ ,ಹಾಗೂ ಪ್ರತಿತಿಂಗಳು 15ನೇ ತಾರೀಖು ಆಯಾ ತಾಲೂಕುಗಳಲ್ಲಿ ತಾಲ್ಲೂಕು ಸಭೆಯನ್ನು, ಕಡ್ಡಾಯವಾಗಿ ನಡೆಸಬೇಕೆಂದು ನಿರ್ಧಾರ ಕೈಗೊಳ್ಳಲಾಯಿತು.ಹಾಗೂ ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ತಾಲ್ಲೂಕುಗಳ , ತಾಲ್ಲೂಕು ಸಮಿತಿಗಳನ್ನು ಅತೀ ಶೀಘ್ರದಲ್ಲಿ ರಚಿಸಲು ಸೂಚನೆ ನೀಡಲಾಯಿತು , ಹಾಗೂ ಮುಖ್ಯವಾಗಿ ಮುಂದಿನ ತಿಂಗಳಿನಿಂದ ಪಕ್ಷದ ಸದಸ್ಯತ್ವ ನೊಂದಣಿಯನ್ನು ಮಾಡಲು ತೀರ್ಮಾನಿಸಲಾಯಿತು ಎಂದರು.

