ಚಳ್ಳಕೆರೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ವತಿಯಿಂದ ಆಪರೇಷನ್ ಸಿಂಧೂರ ತಿರಂಗ ಯಾತ್ರೆ
ದೇಶದ ಭದ್ರತೆಗೆ ಹೋರಾಟ ನಡೆಸುವ ಸೈನಿಕರಿಗೆ ಬೆಂಬಲ ಸೂಚಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಹಿಂದೂ ಪರ ಸಂಘಟನೆಗಳ ನಾಯಕರ ಒಕ್ಕೋರಲ ಮನವಿ
ಚಳ್ಳಕೆರೆ: ದೇಶದ ಸುಪ್ರಸಿದ್ಧ ಪ್ರವಾಸಿ ತಾಣವಾದ ಕಾಶ್ಮೀರದ ಪಹಲ್ಗಾವ್ ಗೆ ಪ್ರವಾಸಕ್ಕೆಂದು ಹೋದ 26 ಅಮಾಯಕ ಜನರ ಪ್ರಾಣವನ್ನು ಬಲಿ ಪಡೆದು ಅಟ್ಟಹಾಸ ಮೆರೆದ ಶತ್ರುದೇಶ ಪಾಕಿಸ್ತಾನದ ಭಯೋತ್ಪಾದಕರಿಗೆ ಭಾರತದ ಸೇನೆ ಆಪರೇಷನ್ ಸಿಂಧೂರದ ಮೂಲಕ ತಕ್ಕ ಉತ್ತರ ನೀಡಿರುವುದು ಇಂದು ಭಾರತೀಯರು ಹೆಮ್ಮೆ ಪಡುವ ವಿಷಯವಾಗಿದೆ ಎಂದು ಆರ್ ಎಸ್ ಎಸ್ ಸಂಘಟನೆಯ ಮುಖಂಡರಾದ ಕುಸುಮಾದೇವಿ ಅಭಿಪ್ರಾಯಪಟ್ಟರು.
ನಗರದಲ್ಲಿ ಮಂಗಳವಾರ ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಆಪರೇಷನ್ ಸಿಂಧೂರ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ನಗರದ ನೆಹರು ವೃತ್ತದಲ್ಲಿ ಮಾತನಾಡಿದ ಅವರು ಇಂದು ದೇಶದಲ್ಲಿ ಹಿಂದೂ ಧರ್ಮದ ಬಗ್ಗೆ ದೇವಾಲಯ ಮಠ ಮಂದಿರಗಳಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಇಂದಿನ ಯುವ ಜನತೆ ದೇಶದ ಭದ್ರತೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ತನ್ನ ದಿಟ್ಟತನದ ಹೋರಾಟದ ಮನೋಭಾವ ಹೊಂದಿರುವ ವ್ಯೋಮಿಕಾ ಸಿಂಗ್ ಕರ್ನಲ್ ಸೋಫಿಯಾರಂತಹ ಮಹಿಳೆಯರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಮಹಿಳೆಯರು ಇಚ್ಛಾಶಕ್ತಿ ಇದ್ದರೆ ದೇಶಕ್ಕಾಗಿ ಯಾವ ಕೊಡುಗೆಯನ್ನು ಬೇಕಾದರೂ ನೀಡಬಹುದು ಎಂಬುದಕ್ಕೆ ಈ ಹಿಂದಿನ ಹಲವಾರು ಮಹಿಳಾ ಹೋರಾಟಗಾರರು ನಿದರ್ಶನರಾಗಿದ್ದಾರೆ ಪೋಷಕರು ಮಕ್ಕಳನ್ನು ತಮ್ಮ ಇಚ್ಛೆಯಂತೆ ಬೆಳೆಸದೆ ಅವರಲ್ಲಿ ದೇಶಾಭಿಮಾನವನ್ನು ಬಿತ್ತಿ ದೇಶ ಸೇವೆಗೆ ಕೊಡಗೆ ನೀಡಬೇಕು ಎಂದು ತಿಳಿಸಿದರು.
ಆರ್ ಎಸ್ ಎಸ್ ಮುಖಂಡ ಅವಿನಾಶ್ ಮಾತನಾಡಿ
ಕಾರ್ಯಕ್ರಮಕ್ಕೆ ಮುನ್ನ ನಗರದ ಚಿತ್ರದುರ್ಗ ರಸ್ತೆಯ ವಾಸವಿ ಕಾಲೇಜ್ ಮುಂಭಾಗದಿಂದ ವಾಲ್ಮೀಕಿ ವೃತ್ತ ಅಂಬೇಡ್ಕರ್ ವೃತ್ತ ನೆಹರು ವೃತ್ತ ಹಾಗೂ ಕೆ ಎಸ್ ಆರ್ ಟಿ ಸಿ ನಿಲ್ದಾಣದಿಂದ ವಾಪಸ್ ಬಂದು ನೆಹರು ವೃತ್ತದಲ್ಲಿ ಸಮಾವೇಶಗೊಂಡಿತು ಸುಮಾರು ಒಂದು ಕಿಲೋಮೀಟರ್ ವರೆಗೆ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಿಂದೂಪರ ಸಂಘಟನೆಗಳು ಭಾರತದ ಧ್ವಜವನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ ಟಿ ಕುಮಾರಸ್ವಾಮಿ ಜಯ ಪಾಲಯ್ಯ ಬಾಳೆಕಾಯಿ ರಾಮದಾಸ್ ನಿವೃತ್ತ ತಹಸೀಲ್ದಾರ್ ಎನ್ ರಘುಮೂರ್ತಿ ಮಾತೃಶ್ರೀ ಮಂಜುನಾಥ್ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

