ಚಳ್ಳಕೆರೆ :
ವಾಣಿ ವಿಲಾಸಸಾಗರ ನೀರನ್ನು ಪ್ರತಿ ವರ್ಷದಂತೆ ಈ ಬಾರಿಯೂ ವೇದಾವತಿ ನದಿ ಗೆ ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿದ್ದಾರೆ.
ಅವರು ನಗರದ ನೆಹರು ವೃತ್ತದಲ್ಲಿ ಇರುವ ರಾಜ್ಯ ರೈತ ಸಂಘಟನೆಯ ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ವಾಣಿ ವಿಲಾಸಗದ ನೀರನ್ನು ವೇದಾವತಿ ನದಿ ಪಾತ್ರಕ್ಕೆ ಹರಿಸವುದುರಿಂದ ಬಯಲು ಚಳ್ಳಕೆರೆ ತಾಲೂಕಿನ ನೂರಾರು ರೈತರ ಕುಡಿಯುವ ನೀರಿನ ಭವಣಿ ತಪ್ಪಿದಂತಾಗುತ್ತದೆ ಇನ್ನೂ ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯ ಸಂಕುಲ ಉಳಿಯುತ್ತದೆ ಆದ್ದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಸ್ಥಳೀಯ ಶಾಸಕರು ಹಾಗೂ ಸಂಬಂದಿಸಿದ ಇಲಾಖೆ ಅಗತ್ಯ ಕೈಗೊಂಡು ನೀರು ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

