ನಾಯಕನಹಟ್ಟಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಡಾ. ಬಿ.ಆರ್ ಅಂಬೇಡ್ಕರ್ ಡಾ. ಬಾಬು ಜಗಜೀವನ್ ರಾಮ್ ರವರ ಭಾವಚಿತ್ರ ಅದ್ದೂರಿ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ.
ಸೌಲಭ್ಯ ದೊರೆತಾಗ ತಳ ಸಮುದಾಯ ಬದುಕು ಉತ್ತಮ ಶಾಸಕ ಎನ್ ವೈ ಗೋಪಾಲಕೃಷ್ಣ.
ನಾಯಕನಹಟ್ಟಿ ”ದೇಶದಲ್ಲಿನ ತಳ ಸಮುದಾಯಗಳು ಸೇರಿದಂತೆ ಪ್ರತಿಯೊಬ್ಬರಿಗೂ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯ ದೊರೆತಾಗ ಅವರ ಬದುಕು ಉತ್ತಮಗೊಳ್ಳಲು ಸಾಧ್ಯ” ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್. ವೈ.ಗೋಪಾಲಕೃಷ್ಣ ಹೇಳಿದರು.
ಇಲ್ಲಿನ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ನಾಯಕನಹಟ್ಟಿ ಹೋಬಳಿಯ ಮಾದಿಗ ಸಮಾಜ ಡಾ|| ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿಯ ಆಚರಣೆ ಹಾಗೂ ಮಾದಿಗ ನೌಕರರ ವರ್ಗ ನಾಯಕನಹಟ್ಟಿ ಹೋಬಳಿ ಮಾದಿಗ ಸೇವಾ ಟ್ರಸ್ಟ್ (ರಿ) ಇವರ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ಅಂಬೇಡ್ಕರ್ 134ನೇ ಮತ್ತು ಡಾ.ಬಾಬು ಜಗಜೀವನ್ ರಾಮ್ 118ನೇ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಕರ ನುಡಿಯನ್ನು ಮಾತನಾಡಿದರು. ”ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ನಮ್ಮದೇ ಆದ ಸಂವಿಧಾನವಿರಲಿಲ್ಲ. ಆಗ ಅಂಬೇಡ್ಕರ್ ದೇಶ, ವಿದೇಶಗಳ ಉತ್ತಮ ಶಿಕ್ಷಣ ಪಡೆದು ಸಂವಿಧಾನ, ಅಧ್ಯಯನ ನಡೆಸಿ ಶ್ರೇಷ್ಟ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಿದರು. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ತತ್ವದ ಅಡಿಯಲ್ಲಿ ಸಂವಿಧಾನ ರಚಿಸಿ ನ್ಯಾಯ ಕಲ್ಪಿಸಿದ್ದು, ಅವರ ಆದರ್ಶದ ಹಾದಿಯಲ್ಲಿ ನಾವು ನಡೆಯಬೇಕಿದೆ ಎಂದರು.
ಮಾಜಿ ಸಂಸದ ಹಾಗೂ ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತಾನಾಡಿದ ಅವರು ಈ ದೇಶದ ಸ್ವಾಭಿಮಾನವನ್ನು ಡಾ|| ಬಿ ಆರ್ ಅಂಬೇಡ್ಕರ್ ಆರ್ಥಿಕ ಕಡುಬಡತನದಿಂದ ವ್ಯಾಸಂಗವನ್ನು ಸಾಮಾಜಿಕ ಸೇವೆಯಲ್ಲಿ ಕಾಲಜಿಯುಳ್ಳ ಇವರು ಸಾಮಾಜಿಕ ಸೇವೆಗಾಗಿ ತಮ್ಮ ಬದುಕನ್ನು ಗುರುತಿಸಿಕೊಳ್ಳುತ್ತಾರೆ. ದಲಿತ ವರ್ಗದವರನ್ನು ಜಾಗೃತರನ್ನಾಗಿ ಮಾಡಲು ಅವರಲ್ಲಿ ಶಿಕ್ಷಣದ ಪ್ರಸಾರ ಮಾಡಲು ಸಂಸ್ಕೃತಿಯ ಬಗ್ಗೆ ತಿಳಿಸಲು ಆರ್ಥಿಕ ಸೌಕರ್ಯ ಮಾಡಲು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಇವರ ಉದ್ದೇಶವಾಗಿತ್ತು.
ಅಂಬೇಡ್ಕರ್ ತಮ್ಮ ಜೀವನದಲ್ಲಿ ಪಟ್ಟ ಕಷ್ಟಗಳಿಂದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂಬ ಕನಸು ಕಂಡಿದ್ದರು. ಅವರು ನೀಡಿದ ಸಂವಿಧಾನದ ಫಲವಾಗಿ ತಳ ಸಮುದಾಯಗಳಿಗೆ ಸೌಲಭ್ಯ ದೊರೆಯುವಂತೆ ಆಗಿದೆ ಎಂದರು.
ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿದರು ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರು 1950ರಲ್ಲಿ ಈ ದೇಶದಲ್ಲಿ ಎಸ್ಸಿ ಎಸ್ಟಿ ಜನಾಂಗಕ್ಕೆ ಅವಕಾಶವನ್ನು ಮಾಡಿಕೊಟ್ಟಾಗ ಸ್ವಾತಂತ್ರದ ನಂತರ ಅನೇಕ ಜಾತಿಗಳು ಸೇರ್ಪಡೆಗೊಂಡ ನಂತರ ಮೂಲ ಅಸ್ಪೃಶ್ಯರಿಗೆ ಮೀಸಲಾತಿ ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ಆಂಧ್ರಪ್ರದೇಶದಲ್ಲಿ ಮಂದಕೃಷ್ಣ ಮಾದಿಗ ಅವರು ಮಾದಿಗರ ಮೀಸಲಾತಿ ಹೋರಾಟ ಹುಟ್ಟಿಕೊಂಡಾಗ ಅದೇ ರೀತಿ ಕರ್ನಾಟಕದಲ್ಲಿ ಮಾದಿಗರ ಮೀಸಲಾತಿ ಹೋರಾಟ ಪ್ರಾರಂಭವಾಗುತ್ತದೆ 30 ವರ್ಷಗಳ ಕಾಲ ನಿರಂತರವಾಗಿ ಹೋರಾಟ ಮಾಡಿದರೂ ಕೂಡ ರಾಜ್ಯ ಸರ್ಕಾರ ಮೀಸಲಾತಿ ಕೊಡುವುದಕ್ಕೆ ಮೀನಾ ಮೇಷ ಏಣಿಸುತ್ತಿದೆ ಮಾದಿಗರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದರು.
ಶ್ರೀಮತಿ ಅಕ್ಷತಾ ಕೆ ಸಿ ಹಾವೇರಿ, ಕೊಡಿಹಳ್ಳಿ ಸಂತೋಷ್, ಕೊಟ್ಟ ಶಂಕರ್, ವಿಶೇಷ ಉಪನ್ಯಾಸ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವ ಮಂಗಳ ಉಮಾಪತಿ, ಸದಸ್ಯರಾದ ಜೆ.ಆರ್ ರವಿಕುಮಾರ್, ಎಂ ಟಿ ಮಂಜುನಾಥ್, ಮುಖಂಡರಾದ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಟಿ .ಬಂಗಾರಪ್ಪ ಅಧ್ಯಕ್ಷರು ನಾಯಕನಹಟ್ಟಿ ಹೋಬಳಿ ಮಾದಿಗ ಸೇವಾ ಟ್ರಸ್ಟ್ ನಾಯಕನಹಟ್ಟಿ ಬಿ.ಪಿ. ಪ್ರಕಾಶ್ ಮೂರ್ತಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಮೊಳಕಾಲ್ಮೂರು ತಾಲೂಕು ಜೆಡಿಎಸ್ ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ ,ಮುಖಂಡ ಟಿ ವೀರಭದ್ರಪ್ಪ, ವಕೀಲ ಹಿರೇಹಳ್ಳಿ ಮಲ್ಲೇಶ್, ಕುದಾಪುರ ಜಿ.ಬಿ .ಉಮೇಶ್ ಲೋಕಾಯುಕ್ತ ಬೆಂಗಳೂರು, ಬಗರ್ ಹುಕುಂ ಕಮಿಟಿ ಸದಸ್ಯ ಪಿ .ಜಿ .ಬೋರನಾಯಕ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ. ಬಿ. ಮುದಿಯಪ್ಪ, ಡಿ. ಓ. ಮೊರಾರ್ಜಿ, ಮರಿಪಾಲಯ್ಯ, ಎಸ್ ಬಿ. ತಿಪ್ಪೇಸ್ವಾಮಿ ಕುದಾಪುರ ತಾರಕೇಶ್ ಮಲ್ಲೇಬೋರನಹಟ್ಟಿ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ. ಶಂಕರಸ್ವಾಮಿ, ಎಸ್. ಬಿ. ತಿಪ್ಪೇಸ್ವಾಮಿ ಕುದಾಪುರ, ನಲಗೇತನಹಟ್ಟಿ ಕೆ.ಬಿ. ನಾಗರಾಜ್, ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ ಪಿಎಸ್ಐ ದೇವರಾಜ್, ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್, ಸೇರಿದಂತೆ ಸಮಸ್ತ ಹೋಬಳಿಯ ಮಾದಿಗ ಸಮುದಾಯದ ಯುವಕರು ಮುಖಂಡರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಸಾರ್ವಜನಿಕರು ಉಪಸ್ಥಿತರಿದ್ದರು

