ದೊರೆಗಳ ದರ್ಬಾರ್ ದಸರಾ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪಟ್ಟಣ ಪಂಚಾಯತಿ ಸದಸ್ಯ ಎನ್ ಮಹಾಂತಣ್ಣ ಮನವಿ.

ನಾಯಕನಹಟ್ಟಿ:: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಹಾಗೂ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಸಮಸ್ತ ನಾಯಕ ಸಮುದಾಯದ ಮುಖಂಡರ ನೇತೃತ್ವದಲ್ಲಿ ಅಕ್ಟೋಬರ್ 2 ರಂದು ಶ್ರೀ ಹಟ್ಟಿ ಮಲ್ಲಪ್ಪ ನಾಯಕರ ದೊರೆಗಳ ವಂಶಸ್ಥರು ನಾಯಕನಹಟ್ಟಿ ಹಾಗೂ ಸಮಸ್ತ ನಾಯಕ ಸಮುದಾಯದವರಿಂದ ದೊರೆಗಳ ದರ್ಬಾರ್ ದಸರಾ ಉತ್ಸವ 2025 ಮತ್ತು ವಾಲ್ಮೀಕಿ ಪುತ್ತಳಿ ಪ್ರತಿಷ್ಠಾಪನೆ ಪ್ರಯುಕ್ತ ಪುರುಷರ ಮತ್ತು ಮಹಿಳೆಯರ ಬಯಲು ಜಂಗಿ ಕುಸ್ತಿ ಪಂದ್ಯಾವಳಿಗಳು ದೊರೆಗಳ ದಸರಾ ಉತ್ಸವದ ಪ್ರಯುಕ್ತ ಕಾರ್ಯಕ್ರಮವನ್ನು ಹಟ್ಟಿ ದೊರೆ ವಂಶಸ್ಥರಿಂದ ಬೆಳಗ್ಗೆ ಒಂಬತ್ತು ಗಂಟೆಗೆ ಮೆರವಣಿಗೆ ಮತ್ತು ಶ್ರೀ ಹಟ್ಟಿ ದೊರೆಗಳ ಸ್ಮಾರಕಗಳಿಗೆ ದೊರೆಗಳಿಂದ ಹಿರಿಯರಿಗೆ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಸಮಸ್ತ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ನಾಯಕ ಸಮುದಾಯದವರು ಮತ್ತು ಇತರೆ ಸಮುದಾಯದವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡುವಂತೆ ತಿಳಿಸಿದರು.

ಇದೆ ವೇಳೆ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಟಿ ಬಸಪ್ಪನಾಯಕ ಮಾತನಾಡಿದರು.

ಪಟ್ಟಣ ಪಂಚಾಯತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ.

ಮುಖಂಡ ಎಸ್ ಟಿ ಬಸವರಾಜ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ, ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷ ಡಿ ಬಿ ಕರಿಬಸಪ್ಪ ಚೌಳಕೆರೆ, ಡಿ ಬಿ ಬೋರಯ್ಯ, ದೊರೆ ತಿಪ್ಪೇಸ್ವಾಮಿ, ಜಿ.ಬಿ. ಮುದಿಯಪ್ಪ, ವಕೀಲ ನಾಗೇಂದ್ರಪ್ಪ ರಾಮದುರ್ಗ ಬಂಗಾರಪ್ಪ, ಚೌಳಕೆರೆ ಬಸಣ್ಣ, ಗೌಡಗೆರೆ ಟಿ ರಂಗಪ್ಪ, ಆರ್ ಪಾಲಯ್ಯ, ಚನ್ನಬಸಯ್ಯನಹಟ್ಟಿ ಡಿ ಬಿ ಬೋಸಯ್ಯ, ಕೊಂಡಯ್ಯನಕಪಿಲೆ ಬೋರಣ್ಣ, ಮಲ್ಲೂರಹಳ್ಳಿ ಗುಂಡಪ್ಪ,ಬೋಸೆದೇವರಹಟ್ಟಿ ಚನ್ನಕೇಶವ, ನಾಯಕನಹಟ್ಟಿ ಓಬಳೇಶ್, ಚೌಳಕೆರೆ ಶಿವರಾಜ್, ಇದ್ದರು.

About The Author

Namma Challakere Local News
error: Content is protected !!