ಚಳ್ಳಕೆರೆ : ಒಂದೇ ಶಾಲೆಯಲ್ಲಿ 18 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳಿಂದ ಅದ್ದೂರಿ ಬಿಳ್ಕೋಡುಗೆ.
ನೆಚ್ಚಿನ ಗುರುಗಳಿಗೆ ಬೆಳ್ಳಿರಥದಲ್ಲಿ ಅದ್ದೂರಿ ಮೆರವಣಿಗೆ ಮಾಡುವ ಮೂಲಕ ಆತ್ಮೀಯ ಬಿಳ್ಕೋಡುಗೆ ನೀಡಿದ್ದಾರೆ.
ಹೌದು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ಸುಮಾರು 18 ವರ್ಷಗಳ ಕಾಲ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಶಿಕ್ಷಕ ಟಿ. ಮಹೇಶ್ ರವರಿಗೆ ಗ್ರಾಮದ ಗುರು ಹಿರಿಯರು ಶಿಕ್ಷಣ ಪ್ರೇಮಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಅದ್ದೂರಿಯಾಗಿ ಬಿಳ್ಕೊಡುಗೆ ಸಮಾರಂಭವನ್ನು ಆಚರಿಸಿದರು.
ಶಿಕ್ಷಕರನ್ನು ಹಾಗೂ ಅವರ ಕುಟುಂಬದವರನ್ನು ಸಾರೋಟ ರಥದಲ್ಲಿ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಪೂರ್ಣಕುಂಭ ಮೇಳದೊಂದಿಗೆ ಮೆರವಣಿಗೆ ಮೂಲಕ ತಮ್ಮ ನೆಚ್ಚಿನ ಗುರುವನ್ನು ಬಿಳ್ಕೊಟ್ಟರು,
ಇನ್ನೂ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಿ ಶಿಕ್ಷಕರಿಗೆ ಸನ್ಮಾನಿಸಿ ಗುರುಕಾಣಿಕೆಯನ್ನು ಎಲ್ಲಾ ವಿದ್ಯಾರ್ಥಿಗಳು ನೀಡಿ ಇತರರಿಗೆ ಮಾದರಿಯಾದರು,
ಶಿಕ್ಷಕರಾದ ಮಹೇಶ್ ಟಿ.ರವರು ತಮ್ಮ ಶಾಲೆಗೆ ಬಂದಾಗಿನಿಂದ ಶಾಲೆಯ ಬಗ್ಗೆ ಹಿನ್ನಿಲ್ಲದ ಕಾಳಜಿ, ಹಾಗೂ ಅವರ ನಿಸ್ವಾರ್ಥ ಸೇವೆಗೆ ಗ್ರಾಮದಲ್ಲಿ ಶೈಕ್ಷಣಿಕ ಪರ್ವ ಮುಗಿಲು ಮುಟ್ಟಿತ್ತು.
ಇಂತಹ ಮಾದರಿ ಶಿಕ್ಷಕರು ಕಳೆದ
18 ವರ್ಷಗಳ ಸೇವೆಯಲ್ಲಿ ವಿವಿಧ ಧಾನಿಗಳಿಂದ ಶಾಲೆಗೆ ಸುಮಾರು ಒಂದು ಕೋಟಿಗೂ ಅಧಿಕ ಮೊತ್ತದ ಶಾಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದಂತಹ ಗುರುಗಳಿಗೆ ಅಭೂತಪೂರ್ವ ರೀತಿಯಲ್ಲಿ ಬಿಳ್ಕೋಟ್ಟಿದ್ದು ನಿಜಕ್ಕೂ ಗುರುವಿನ ಪ್ರೀತಿಗೆ ಮತ್ತೆನು ಸಾಟಿ ಇಲ್ಲದಂತಾಗಿತ್ತು.

