ಚಳ್ಳಕೆರೆ :
ನಗರದಲ್ಲಿರುವ ಹೆಚ್.ಪಿ.ಸಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ (ಸ್ಟಡಿ ಸೆಂಟರ್) ಆರಂಭಿಸುವ ಮೂಲಕ ಹೊಸ ಅಧ್ಯಯ ಶುರುವಾಗಲಿದೆ.
ಇದಕ್ಕೆ ಪೂರಕವಾದ ಸೌಲಭ್ಯಗಳನ್ನು ಹೊದಗಿಸುವ ಜವಾಬ್ದಾರಿ ಆಯಾ ಕಾಲೇಜಿನ ಮೂಲಕ ಸಜ್ಜುಗೊಳ್ಳುತ್ತಿದೆ.
ಇದರ ಅಂಗವಾಗಿ ಕಾಲೇಜು ಆವರಣದಲ್ಲಿ ವಿಶಾಲವಾದ ರಸ್ತೆ, ಹಾಗೂ ಕಾಲೇಜು ಕ್ಯಾಂಪಸ್ ಗೆ ವಿದ್ಯಾರ್ಥಿಗಳು ಬರುವುದಕ್ಕೆ ದ್ವೀಪಥ ರಸ್ತೆ, ಗಾರ್ಡನ್, ಗ್ರಂಥಾಲಯಕ್ಕೆ ಆಡಿಟೋರಿಯಂ ಗೆ ದಾರಿ ಈಗೇ ಸಕಲ ಮೂಲ ಭೂತ ಸೌಲಭ್ಯಗಳನ್ನು ಹೊದಗಿಸುವುದಾಗಿದೆ.
ಇದರಿಂದ ಅನಿವಾರ್ಯವಾಗಿ ಕೆಲವು ಮರಗಳು ತೆರುವುಗೊಳಿಸಿ ಬೇರೆಡೆ ಮರಗಳನ್ನು ಬೆಳೆಸುವು ಉದ್ದೇಶ ಹೊಂದಲಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ “ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ” ಎಂಬುದನ್ನು
ಪಸರಿಸುವ ಸಂಬಂಧ ರಾಜ್ಯದಾದ್ಯಂತ ಪ್ರಾದೇಶಿಕ ಕೇಂದ್ರಗಳು ಮತ್ತು ಕಲಿಕಾರ್ಥಿ ಸಹಾಯ
ಕೇಂದ್ರಗಳನ್ನು ಸ್ಥಾಪಿಸಿ ಉನ್ನತ ಶಿಕ್ಷಣವನ್ನು ನೀಡುತ್ತಾ ಬಂದಿದೆ.
ಮುಂದುವರೆದು ಸ್ಥಳೀಯ ಶಾಸಕ, ಟಿ.ರಘುಮೂರ್ತಿ, ಕರ್ನಾಟಕ ಸರ್ಕಾರ. ಇವರು ಪತ್ರ ಮುಖೇನ ಚಳ್ಳಕೆರೆ
ನಗರದಲ್ಲಿರುವ ಹೆಚ್.ಪಿ.ಸಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕ.ರಾ.ಮು.ವಿ.ಯ
ಅಧ್ಯಯನ ಕೇಂದ್ರ (ಸ್ಟಡಿ ಸೆಂಟರ್) ಆರಂಭಿಸಲು ಡಾ.ಎಂ.ಸಿ.ಸುಧಾಕರ್,, ಉನ್ನತ ಶಿಕ್ಷಣ
ಸಚಿವರು, ಕರ್ನಾಟಕ ಸರ್ಕಾರ. ಇವರಿಗೆ ಕೋರಿದರನ್ವಯ ಈ ವಿಷಯವಾಗಿ ಅಗತ್ಯ ಕ್ರಮ ಕೈಗೊಳ್ಳಲು ಉನ್ನತ ಶಿಕ್ಷಣ ಸಚಿವರು ಕುಲಪತಿಗಳಿಗೆ ಪತ್ರ ಮುಖೇನ ಸೂಚಿಸಿ ಮಂಜೂರು ಮಂಡಿಸಿದ್ದಾರೆ. ಎನ್ನಲಾಗಿದೆ ಇದರ ಹೊರತಾಗಿ ಕಾಲೇಜ್ ಕ್ಯಾಂಪಸ್ ಜಿಲ್ಲೆಯಲ್ಲಿ ಮಾದರಿಯಾಗಬೇಕು ಎನ್ನುವ ಉದ್ದೇಶ ಹೊಂದಿದೆ ಎನ್ನುವುದು ಕಾಲೇಜಿನ ಆಶಯವಾಗಿದೆ.

