ಮೊಳಕಾಲ್ಕೂರು: ಜಮೀನುಗಳಿಗೆ ದಾರಿ ಯಾವುದಯ್ಯ
ಮೊಳಕಾಲ್ಕೂರಿನ ತುಮಕೂರ್ಲಹಳ್ಳಿಯಲ್ಲಿ ಕೆಲ ಸೋಲಾರ್
ಕಂಪನಿಗಳು ರೈತರ ಜಮೀನುಗಳಿಗೆ ಹೋಗುವ ಬಂಡಿ ದಾರಿಯನ್ನು
ಮುಚ್ಚಿ, ನಾಮಫಲಕ ಅಳವಡಿಸಿ ಒತ್ತುವರಿ ಮಾಡಿರುವುದಾಗಿ
ರೈತರು ತಹಶೀಲ್ದಾರ್ ಜಗನ್ನಾಥ್ ಅವರಲ್ಲಿ ಆಕ್ರೋಶ
ವ್ಯಕ್ತಪಡಿಸಿದರು. ಇಂದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ಗೆ
ರೈತರು, ಬಿತ್ತನೆ ಸಮಯದಲ್ಲಿ ಬೀಜ, ರಸಗೊಬ್ಬರ, ರಸಾಯನಿಕ
ಸಾಮಗ್ರಿಗಳನ್ನು ಕೊಂಡೊಯ್ಯಲು ದಾರಿಯೇ ಇಲ್ಲದಂತಾಗಿದೆ.
ನಮಗೆ ದಾರಿ ಮಾಡಿಕೊಡಿ ಎಂದು ಮನವಿ ಮಾಡಿದರು.

