ಚಳ್ಳಕೆರೆ :
ನಗರದಲ್ಲಿ ವಲಸೆ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿರುವ ಕಡೆ ಬೇಕರಿ ಗ್ಯಾರೇಜ್ .ಇಟ್ಟಿಗೆ ಬಟ್ಟಿ ಸೇರಿದಂತೆ ವಿವಿಧ ಕಡೆ ಮಕ್ಕಳನ್ನು ಕೆಲಸಕ್ಕೆ ಬಳಸದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಕರೆದಿದ್ದ ಬಾಲಕಾರ್ಮಿರ ದಿನಾಚರಣೆ ಅಂಗವಾಗಿ ಕರೆದಿದ್ದ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಕೇವಲ ದಿನಾಚರಣೆಗೆ ಸೀಮಿತವಾಗದೆ ದಾಳಿ ಮಾಡುವ ಸುದ್ದಿ ಗೊತ್ತಾಗದಂತೆ ಅನಿರೀಕ್ಷಿತ ದಾಳಿ ಮಾಡಿ ಬಾಲಕಾರ್ಮಿಕರನ್ನು ಪತ್ತೆ ಮಾಡಿ ಮುಖ್ಯವಾಹಿನಿಗೆ ತರಲು ಶಾಲೆಗೆ ದಾಖಲು ಮಾಡ ಬೇಕು ಬಾಲಕಾರ್ಮಿಕಿಂದ ದುಡಿಸಿಕೊಳ್ಳು ಮಾಲಿಕರಿಗೆ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ತಿಳಿಸಿದರು.

ಬಿಇಒ ಕೆ.ಎಸ್.ಸುರೇಶ್ ಮಾತನಾಡಿ ಇಟ್ಟಿಗೆ ಬಟ್ಟಿ.ಇದ್ದಿಲು ಸುಡಲು ಬೇರೆ ರಾಜ್ಯಗಳಿಂದ ವಲಸೆ ಕಾರ್ಮಿಕರ ಸನೀಕ್ಷೆ ನಡೆಸಿ ಜಿಲ್ಲಾಪಂಚಾಯಿತಿಯಿಂದ ಅನುಮತಿ ಪಡೆದು ಕೆಲಸ ಸ್ಥಳದಲ್ಲೆ ಟೆಂಟ್ ಶಾಲೆ ತೆರೆಯುವ ಉದ್ದೇಶ ಮಾಡಲಾಗುವುದು ಎಂದರು.

ಜಿಲ್ಲಾ ಕಾರ್ಮಿಕ ಇಲಾಖೆ‌ಅಧಿಕಾರಿ ಸಂತೀಷ್ ಮಾತನಾಡಿ ಜೂ.12 ಬಾಲಕಾರ್ಮಿಕ ದಿನಾಚರಣೆಯನ್ನು ತಾಲೂಕು ಹಾಗುಇ ಆಯಾ ಪಂಚಾಯಿತಿ ಕೇಂದ್ರಗಳಲ್ಲಿ ಪ್ರೌಢಶಾಲೆ ಮೇಲ್ಪಟ್ಟ ಹಾಗೂ ಅಂಗನವಾಡಿ .ಆಶಾ ಕಾರ್ಯಕರ್ತೆಯರು. ಗ್ರಾಪಂ ಸದಸ್ಯರು ಭಾಗವಹಿಸಿ ಬಾಲಕಾರ್ಮಿಕ ಬಗ್ಗೆ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ತಿಳಿಸಿದರು.

ಸಭೆಯಲ್ಲಿ ಕಾರ್ಮಿಕ ನಿರೀಕ್ಷಕಿ.ಕುಸುಮ. ಪೌರಾಯುಕ್ತ ಜಗರೆಡ್ಡಿ. ಸಮಾಜ ಕಲ್ಯಾಣಾಧಿಕಾರಿ ದೇವ್ಲನಾಯಕ.ಬಿಸಿಎಂ ವ್ಯವಸ್ಥಾಪಕಿ ಲೀಲಾವತಿ. ರೇಷ್ಮೆ ಅಧಿಕಾರಿ ಉಮಾಪತಿ.ಪೋಲಿಸ್ ಇಲಾಖೆ ತಿರುಕಪ್ಪ.ಆರೋಗ್ಯ ಇಕಾಖೆ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!