“ಮಕ್ಕಳು ಗುರುಭಕ್ತಿಯನ್ನು ಬೆಳೆಸಿಕೊಳ್ಳಬೇಕು”- ಚೇತನ್ ಕುಮಾರ್ .

ಚಳ್ಳಕೆರೆ-ಇಂದಿನ ಮಕ್ಕಳು ಗುರುಭಕ್ತಿಯನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನ್ ಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ”ದಲ್ಲಿ ಪಾಲ್ಗೊಂಡು ಅವರು ಗುರುಭಕ್ತಿಯ ಬಗ್ಗೆ ಮಾತನಾಡಿದರು.

ಇಂದಿನ ಮಕ್ಕಳಿಗೆ ಸ್ವಾಮಿ ವಿವೇಕಾನಂದರು ಸೇರಿದಂತೆ ಮಹಾತ್ಮರ ಗುರುಪ್ರೇಮ ಮಾದರಿಯಾಗಬೇಕು ಎಂದರು.ಈ ಶಿಬಿರದ ಪ್ರಯುಕ್ತ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸುವ ವಿವಿಧ ಬಗೆಯ ಆಟಗಳನ್ನು ಡಾ.ಭೂಮಿಕ ಆಡಿಸಿದರು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು, ಶಿಬಿರದಲ್ಲಿ ದೀಪ ರಾಘವೇಂದ್ರ , ಮನೀಷ್, ನಿರ್ಮಲ,ಹರ್ಷಿತಾ, ಸುದೀಪ್,ಯಶಸ್ವಿ,ಲಕ್ಷ್ಮೀ, ಯಶಸ್, ಮನಸಿರಿ, ಪ್ರತೀಕ್ಷಾ,ಧ್ರುವ ನಾರಾಯಣ, ನಿಖಿಲೇಶ್ ಯಾದವ್,ನಿಶಿಕಾ, ವರ್ಷ,ಕೋಮಲಸಿರಿ,ವಿವಿಕ್ತ, ವೈಷ್ಣವಿ,ಪ್ರಣಾಮ್ಯ, ಮನ್ವಿತ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.

About The Author

Namma Challakere Local News
error: Content is protected !!