ಚಿತ್ರದುರ್ಗ: ಚಿರತೆ ಹಿಡಿದು ಜನ ಜಾನುವಾರುಗಳ
ರಕ್ಷಸಿ
ಚಿತ್ರದುರ್ಗ ತಾಲೂಕಿನ ದೊಡ್ಡಾಲಘಟ್ಟದಲ್ಲಿ ಚಿರತೆಯ ಹಾವಳಿ
ಹೆಚ್ಚಾಗಿದ್ದು, ರೈತ ನಾಗರಾಜ್ ಅವರ ಕುರಿ ಮರಿಗಳ ಮೇಲೆ
ಚಿರತೆ ದಾಳಿ ನಡೆಸಿದೆ. ಅದೃಷ್ಟವಶಾತ್, ರೈತರು ಮರಿಗಳನ್ನು
ರಕ್ಷಸಿದ್ದಾರೆ. ಗ್ರಾಮಸ್ಥರು ಹಲವು ದಿನಗಳಿಂದ ಚಿರತೆಯ
ಉಪಟಳದಿಂದ ಭಯಭೀತರಾಗಿದ್ದಾರೆ. ಕೂಡಲೇ ಚಿರತೆಗೆ
ಬೋನಿಟ್ಟು ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ
ಮಾಡಿದ್ದಾರೆ.

