ಅವರು ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಡೆಹಟ್ಟಿ ನನಿವಾಳ ಕ್ಲಸ್ಟರ್ ಶಾಲೆಯ 2025-26 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಳ್ಳಕೆರೆ :

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಶಿಕ್ಷಣವೇ ಶಕ್ತಿ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಿ, ಸರ್ಕಾರಿ ಶಾಲೆ ಉಳಿಸಿ ಎಂದು ಎಸ್ ಡಿ ಎಂಸಿ ಅಧ್ಯಕ್ಷರಾದ ಗೋವಿಂದರಾಜು ಹೇಳಿದರು.

ಅವರು ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಡೆಹಟ್ಟಿ ನನಿವಾಳ ಕ್ಲಸ್ಟರ್ ಶಾಲೆಯ 2025-26 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದಾಖಲಾತಿ ಆಂದೋಲನ ಊರಿನ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸುವುದರ ಮೂಲಕ ನಮ್ಮೂರ ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ದಾಖಲಾತಿ ಮಾಡಿಸಿ, ಗುಣಮಟ್ಟದ ಶಿಕ್ಷಣ ಪಡೆಯಿರಿ, ಸುಚಿತ್ವ ಮತ್ತು ಶೃಂಗಾರ ಮಾಡುವ ಮುಖೇನ ಚಾಲನೆ ನೀಡಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ R ನಾಗರಾಜ್ ಮಾತನಾಡಿ,
ಮಕ್ಕಳಿಗೆ ಅನೇಕ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳಿರಿ ಎಂಬ ಘೋಷವಾಕ್ಯದೊಂದಿಗೆ
ಮತ್ತು ಎರಡು ವರ್ಷ ಕಲಿಕೆಯಲ್ಲಿ ಹರ್ಷ ಎಂಬ ಘೋಷಾವಾಕ್ಯ ದೊಂದಿಗೆ ಶಾಲೆಗೆ ಇಬ್ಬರು ವಿದ್ಯಾರ್ಥಿಗಳನ್ನು ಒಂದನೇ ತರಗತಿಗೆ ದಾಖಲಾತಿಯನ್ನು ಮಾಡಿಕೊಳ್ಳಲಾಯಿತು ಎಂದರು.

ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಗೀತಾ, ಪಾಪಯ್ಯ , ಜಿ ತಿಪ್ಪೇಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ಗಿರಿಜಾ, ತಿಪ್ಪೇಸ್ವಾಮಿ, ಸಹಾಯಕರಾದ ಮಧುಕಲ, ಹಾಗೂ ಊರಿನ ಗಣ್ಯರು ಮುಖಂಡರು ಮತ್ತು ಎಸ್ ಡಿ ಎಂ ಸಿ ಯ ಸದಸ್ಯರುಗಳು, ಹಾಗೂ ಸಹ ಶಿಕ್ಷಕರಾದ H. ಹನುಮಂತಪ್ಪ, ಮತ್ತುಶಿಕ್ಷಣ ಪ್ರೇಮಿಗಳು ಗ್ರಾಮಸ್ಥರು ಇವರ ಸಮ್ಮುಖದಲ್ಲಿ ನಡೆಯಿತು.

ಆಕಾಶ್ ಆರ್, ಗಗನಪ್ರಿಯ,
ಎಂಬ ಇಬ್ಬರು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ಎಲ್ಲ ಗಣ್ಯರ ಸಮ್ಮುಖದಲ್ಲಿ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು, ಹಾಗೂ ಪ್ರಾರಂಭೋತ್ಸವದ ಪ್ರಯುಕ್ತ ಶಾಲೆಯ ಎಲ್ಲ ಮಕ್ಕಳಿಗೂ ಸಿಹಿ ಊಟ ಉಣಬಡಿಸಲಾಯಿತು.

About The Author

Namma Challakere Local News
error: Content is protected !!