ಚಳ್ಳಕೆರೆ ‌:
ಕರ್ನಾಟಕ ಯುವರಕ್ಷಣಾ ವೇದಿಕೆಯ ವತಿಯಿಂದ ನಟ ಕಮಲ್ ಹಾಸನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ‌ ಯುವ ರಕ್ಷಣಾ ವೇದಿಕೆಯಿಂದ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.

ನಗರದ ತಾಲೂಕು ಕಛೇರಿಯಲ್ಲಿ ರಕ್ಷಣಾ ವೇದಿಕೆಯ ಹಲವಾರು ಕನ್ನಡ ಮನಸ್ಸುಗಳು ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಟ ಕಮಲ್ ಹಾಸನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ನಟ ಕಮಲ್ ಹಾಸನ್ ಗೆ ಇನ್ನು ಮುಂದೆ ಕನ್ನಡದಲ್ಲಿ ಯಾವುದೆ ರೀತಿಯ ಅವಕಾಶವನ್ನು ಕೊಡ ಬಾರದು ಹಾಗೂ ಕರ್ನಾಟಕದ ಯಾವ ಭಾಗದಲ್ಲು ಅವರ “ಥಗ್ ಲೈಫ್ ” ಚಿತ್ರಕ್ಕೆ ಪ್ರಚಾರ ಮತ್ತು ಪ್ರಸಾರ ಮಾಡಲು ಅನುಮತಿ ನೀಡ ಬಾರದು ಎಂದು ಕರ್ನಾಟಕ ಯುವರಕ್ಷಣಾ ವೇದಿಕೆಯಿಂದ ಮನವಿಯನ್ನು ನೀಡಲಾಯಿತು,

ಈ ಒಂದು ಕಾರ್ಯಕ್ರಮದಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕರಾದ ಅಶೋಕ್, ಜಿಲ್ಲಾ ಅಧ್ಯಕ್ಷರಾದ ಮಾರುತಿ ಮೊಗವೀರ , ಉಪಾಧ್ಯಕ್ಷರಾದ ಜಯಣ್ಣ, ಸಹ ಕಾರ್ಯದರ್ಶಿಯಾದ ಶ್ರೀನಿವಾಸ್, ವಿದ್ಯಾರ್ಥಿ ಘಟಕದ ಆದಿತ್ಯ, ಹಾಗೂ
ದೊಡ್ಡ ಉಳ್ಳಾರ್ತಿಯ ಉಪಾಧ್ಯಕ್ಷರಾದ ಸುನೀಲ್, ಚಳ್ಳಕೆರೆ ನಗರ ಘಟಕದ ಪದಾಧಿಕಾರಿಗಳಾದ ಶ್ರೀನಿವಾಸುಲು, ರವಿಕುಮಾರ್, ರವಿಚಂದ್ರ, ತರುಣ್, ಅಂಬರೀಷ್, ನರಸಿಂಹ, ಪುನೀತ್, ಪಾಲ ನಾಯಕ,
ಮಾರುತಿ, ಇನ್ನು ಮುಂತಾದವರು ಉಪಸ್ಥಿತಿಯಲ್ಲಿದ್ದರು

About The Author

Namma Challakere Local News
error: Content is protected !!