ಒಂಟಿ ಮಹಿಳೆ, ವೃದ್ದರು, ಸಹಾಯಕ್ಕೆ “ಆಸರೆ ಯೋಜನೆ”
ಚಳ್ಳಕೆರೆ ನಗರದಲ್ಲಿ ಪರಿಣಾಮಕಾರಿಯಾಗಿ ಜಾರಿ- ಇನ್ಸ್‌ಪೆಕ್ಟರ್ ಕೆ.ಕುಮಾರ್
ಚಳ್ಳಕೆರೆ : ಒಂಟಿ ಮನೆ, ಒಂಟಿ ಮಹಿಳೆ , ವಯೋವೃದ್ದರು ಹಾಗೂ ಇತರರು ಒಂಟಿಯಾಗಿ ವಾಸಿಸುವವರ ಜೊತೆ ಸದಾ ಪೊಲೀಸ್ ಇಲಾಖೆ ಇದೆ ಎಂಬುದು ರಾಜ್ಯ ಸರಕಾರ ಜಾರಿಗೆ ತಂದಿರುವ ಆಸರೆ ಯೋಜನೆಯಾಗಿದೆ ಎಂದು ನಗರ ಠಾಣೆ ಇನ್ಸ್ಪೆಕ್ಟರ್ ಕೆ.ಕುಮಾರ್ ಮಾಧ್ಯಮದೊಟ್ಟಿಗೆ ಮಾತನಾಡಿದರು,
ನಗರದಲ್ಲಿ ದೂರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒಂಟಿಯಾಗಿ ಜೀವನ ನಡೆಸುವಂತಾ ಮಹಿಳೆಯರು, ಹಾಗೂ ವಯೋವೃದ್ದರು ಸಹಾಯಕ್ಕೆ ಪೋಲಿಸ್ ಇಲಾಖೆ ಹಗಲು ರಾತ್ರಿ ಎನ್ನದೆ ಅದಾ ಜೊತೆಗೆ ಇರುತ್ತದೆ,
ಆದ್ದರಿಂದ ಕರ್ನಾಟಕ ರಾಜ್ಯ ಪೊಲೀಸ್
ಇಲಾಖೆಯ “ಆಸರೆ” ಎಂಬ ವಿನೂತನ ಸಮುದಾಯ
ಪೊಲೀಸ್ ಉಪಕ್ರಮವನ್ನು
ಜಿಲ್ಲಾ ವರಿಷ್ಠಾಧಿಕಾರಿಗಳಾದ ರಂಜಿತ್ ಕುಮಾರ್ ಬಂಡಾರು, ಅವರ
ನಿರ್ದೇಶನದಂತೆ,ಡಿವೈಎಸ್ ಪಿ ಸತ್ಯನಾರಾಯಣ ರಾವ್,ಮಾರ್ಗದರ್ಶನದಲ್ಲಿ
ಪರಿಣಾಮಕಾರಿಯಾಗಿ
ಜಾರಿಗೊಳಿಸಲಾಗಿದೆ.
ರಾಜ್ಯದಲ್ಲಿ ಒಂಟಿಯಾಗಿ
ವಾಸಿಸುತ್ತಿರುವ ಮಹಿಳೆಯರು ಹಾಗೂ ವಯೋವೃದ್ಧ
ಹಿರಿಯ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು
ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಇತ್ತೀಚಿನ ದಿನಗಳಲ್ಲಿ ಒಂಟಿತನ, ಅಸುರಕ್ಷತೆ, ಅಭದ್ರತೆ
ಮತ್ತು ಕಾಳಜಿಯ ಕೊರತೆ ಮುಂತಾದ ಸಮಸ್ಯೆಗಳು
ಹೆಚ್ಚುತ್ತಿರುವ ಹಿನ್ನೆಲೆ, “ಆಸರೆ” ಯೋಜನೆ ಒಂದು
ಮಾನವೀಯ ಹೆಜ್ಜೆಯಾಗಿದೆ.
ಈ ಯೋಜನೆಯ ಮೂಲಕ
ಒಂಟಿಯಾಗಿ ವಾಸಿಸುವ ಮಹಿಳೆಯರು ಮತ್ತು ಹಿರಿಯ
ನಾಗರಿಕರು ತಾವು ಒಂಟಿಯಲ್ಲ, ತಮ್ಮೊಂದಿಗೆ ಪೊಲೀಸ್
ಇಲಾಖೆ ಹಾಗೂ ಸರ್ಕಾರ ಸದಾ ಇರುವುದೆಂಬ ಬಲವಾದ
ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಪಡೆಯುತ್ತಿದ್ದಾರೆ.
ಯೋಜನೆಯ ಅನುಷ್ಠಾನದ ಭಾಗವಾಗಿ, ಪೊಲೀಸ್
ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ, ಒಂಟಿಯಾಗಿ
ವಾಸಿಸುವವರ ಕುಂದು-ಕೊರತೆಗಳನ್ನು ಆಲಿಸಿ, ಅಗತ್ಯ
ಸಲಹೆ ಹಾಗೂ ಸಹಾಯವನ್ನು ಒದಗಿಸುತ್ತಿದ್ದಾರೆ. ತುರ್ತು
ಸಂದರ್ಭಗಳಲ್ಲಿ ತಕ್ಷಣ ಸ್ಪಂದನೆ ದೊರೆಯುವಂತೆ ಎಂದು ಕೈಗೊಳ್ಳಲಾಗುತ್ತಿದೆ. “ಆಸರೆ” ಯೋಜನೆ ಕುರಿತು ಜಾಗೃತಿ
ಮೂಡಿಸುವ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತದೆ.
ಹಿರಿಯ ನಾಗರಿಕರು ಹಾಗೂ
ಮಹಿಳೆಯರೊಂದಿಗೆ ನೇರ ಸಂಪರ್ಕ ಸಾಧಿಸಿ ಅವರ
ವಿಶ್ವಾಸ ಗಳಿಸುತ್ತಿದ್ದಾರೆ.
ಒಟ್ಟಿನಲ್ಲಿ, “ಆಸರೆ” ಯೋಜನೆ ಸಮುದಾಯ ಪೊಲೀಸ್
ವ್ಯವಸ್ಥೆಯತ್ತ ಮತ್ತೊಂದು ಹೆಜ್ಜೆಯಾಗಿದ್ದು, ಸುರಕ್ಷಿತ
ಮತ್ತು ವಿಶ್ವಾಸಭರಿತ ಸಮಾಜ ನಿರ್ಮಾಣದ ದಿಸೆಯಲ್ಲಿ
ಮಹತ್ವದ ಪಾತ್ರವಹಿಸಿದೆ.
ಎನ್ನಲಾಗಿದೆ.
ಇದೇ ಸಂಧರ್ಭದಲ್ಲಿ ಪೋಲಿಸ್ ಠಾಣೆಯ ಸಿಬ್ಬಂದಿ ವಂಸತ್ ಕುಮಾರ್, ಅನುಸೂಯಮ್ಮ,ಇತರರು ಒಳಗೊಂಡ ಸಿಬ್ಬಂದಿ ವರ್ಗ ತಮ್ಮ ಬೀಟ್ ವ್ಯಾಪ್ತಿಯಲ್ಲಿ ಒಂಟಿಯಾಗಿ ಇರುವವರಿಗೆ ಆಸರೆಯಾಗಿ ರಾಜ್ಯ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದಾರೆ ಎನ್ನಲಾಗಿದೆ.

