filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.17857143, 0.63504463);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 29;

ಚಳ್ಳಕೆರೆ ಸರಕಾರಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆ ಕಟ್ಟಡ ಕೆಡವಿದವರ ವಿರುದ್ದ ತನಿಖೆ..?
ಶಾಸಕರ ಕನಸಿನ ಸರಕಾರಿ ಬಸ್ ನಿಲ್ದಾಣ ವಿರೂಪ : ಕೆಪಿ.ಭೂತಯ್ಯ ಆರೋಪ
ಚಳ್ಳಕೆರೆ : ಸರಕಾರ ಸ್ವಾಮ್ಯದ ಆಸ್ತಿಗಳನ್ನು ತಮ್ಮ ಸ್ವತಃ ಆಸ್ತಿಗಳಂತೆ ಮನಬಂದಂತೆ ಕಟ್ಟಡಗಳನ್ನು ನವೀಕರಣಗೊಳೀಸುವುದು ಹಾಗೂ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಸೊಚ್ಚಿ ಕಟ್ಟಡಗಳನ್ನು ದೊಡ್ಡದಾಗಿ ವಿಸ್ತರ್ಣ ಮಾಡಿಕೊಳ್ಳುವುದು ಚಳ್ಳಕೆರೆ ನಗರದಲ್ಲಿ ಕಾಣಬಹುದಾಗಿದೆ,
ಹೌದು ಚಳ್ಳಕೆರೆ ನಗರದ ಹೃದಯ ಭಾಗದಲ್ಲಿ ಇರುವ ತಾಲೂಕು ಪಂಚಾಯಿತಿ ವಾಣಿಜ್ಯಮಳಿಗೆಗಳು, ನಗರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳು ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳ ಕರ್ಮ ಕಾಂಡವಾಗಿದೆ. ತಾಲೂಕಿನಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳ ಸೂಚನೆಯಿಲ್ಲದೆ ರಾತ್ರೋ ರಾತ್ರಿ ಸರಕಾರದ ಕಟ್ಟಡಗಳನ್ನು ಕೆಡವಿ ಹೊಸದಾಗಿ ನವೀಕರಣ ಮಾಡುವುದು ಹಲವು ಇಲಾಖೆಗಳ ಕಥೆಯಾಗಿದೆ. ಇನ್ನೂ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರು ತಮಗೆ ಗೊತ್ತಿಲ್ಲವೆಂಬಂತೆ ವರ್ತಿಸುವುದು ಸಾರ್ವಜನಿಕ ವಲಯದಲ್ಲಿ ಬಾರೀ ಸಂಚಲನ ಮೂಡಿಸಿದೆ. ಅದರಂತೆ ನಗರದ ಹೃದಯ ಭಾಗದಲ್ಲಿ ಇರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆ 22ರ ಮಳಿಗೆ ಟೆಂಡರ್ ಮೂಲಕ ಪಡೆದ ಗುತ್ತಿಗೆದಾರರು ಮುಂಬಾಗದ ಶೆಟ್ಟರ್ನ್ನು ಹಿಂಬದಿಗೆ ತಿರುಚಿರುಚಲು ಕಟ್ಟಡವನ್ನು ಕಟ್ ಮಾಡಿರುವುದು ಅಧಿಕಾರಿಗಳ ಕುಮ್ಮಕ್ಕು ಎನ್ನುವಂತಾಗಿದೆ ಎಂದು ಕೆಆರ್ಎಸ್ ಪಕ್ಷದ ರಾಜ್ಯಸಂಚಾಲಕ ಮಹೇಶ್ ಗಂಭೀರವಾಗಿ ಆರೋಪಿಸಿದ್ದಾರೆ.
ಹೇಳಿಕೆ :
ಸರಕಾರದ ಕಟ್ಟಡಗಳನ್ನು ಮನಸೊಚ್ಚಿ ವಿರೂಪಗೊಳಿಸುವವರ ವಿರುದ್ದ ಪ್ರಕರಣ ದಾಖಲಿಸಿಬೇಕು, ಇನ್ನೂ ಇದಕ್ಕೆ ಕುಮಕ್ಕು ನೀಡಿದ ಅಧಿಕಾರಿಗಳೆ ನೇರ ಹೊಣೆ ಹೊರಬೇಕು ಕ್ಷೇತ್ರದ ಶಾಸಕ ಟಿ.ರಘುಮೂರ್ತಿರವರು ತಮ್ಮ ಕನಸಿನಂತೆ ಸರಕಾರಿ ಬಸ್ ನಿಲ್ದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿದ್ದಾರೆ, ಆದರೆ ಗುತ್ತಿಗೆದಾರರು ವಾಣಿಜ್ಯ ಮಳಿಗೆ ಹರಾಜು ಪಡೆದಿದ್ದಾರೆ ಎಂಬ ಕಾರಣಕ್ಕೆ ಸರಕಾರದ ಕಟ್ಟಡ ಹೊಡೆಯುವುದು ಸರಿಯಲ್ಲ, ಈ ಕೂಡಲೇ ಅಧಿಕಾರಿಗಳು ಪರೀಶಿಲನೆ ನಡೆಸಿ ಪ್ರಕರಣ ದಾಖಲಿಸಬೇಕು.
—ಕೆ.ಪಿ.ಭೂತಯ್ಯ ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ.
ಹೇಳಿಕೆ :
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆ 22ರ ಮುಂಬಾಗದ ಶೆಟ್ಟರ್ನ್ನು ಹಿಂಬಾಗಕ್ಕೆ ಬಾಗಿಲು ಮಾಡಲು ಕಟ್ಟಡದ ಬಗ್ಗೆ ಚಳ್ಳಕೆರೆ ಕೆಎಸ್ ಆರ್ ಟಿಸಿ ವ್ಯವಸ್ಥಾಪಕರಿಗೆ ಮಾಹಿತಿ ಇಲ್ಲವಂತೆ ಇನ್ನೂ ನಮ್ಮ ಪತ್ರಿಕೆ ಪ್ರತಿನಿಧಿ ದೂರವಾಣಿ ಮೂಲಕ ಸಂಪರ್ಕಿಸಿದರೆ ದೂರವಾಣಿ ಕರೆ ಕಟ್ ಮಾಡಿದ ಕೆಎಸ್ಆರ್ಟಿಸಿ ಜಿಲ್ಲಾ ವ್ಯವಾಸ್ಥಪಕರು….

About The Author

Namma Challakere Local News
error: Content is protected !!