ಚಳ್ಳಕೆರೆ : ಬಯಲು ಸೀಮೆ ಚಳ್ಳಕೆರೆ ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಅಧಿಕಾರಿಗಳ ಎಡವಟ್ಟಿನಿಂದ ಹಳ್ಳಹಿಡಿಯುವಂತಾಗಿದೆ.
ಹೌದು ಚಳ್ಳಕೆರೆ ತಾಲೂಕಿನ ಕಸವಿಗೊಂಡನಹಳ್ಳಿ ಗ್ರಾಮದ ಮೂಲಕ ಹಾದು ಹೋದ ಜಲಜೀವನ್ ಮಿಷನ್ ನ ತಳಕು ಮಾರ್ಗ ದ ಕೆಡಿ ಕೋಟೆಗೆ ಓವರ್ ಹೆಡ್ ಟ್ಯಾಂಕ್ ಗೆ ನೀರು ಸರಬರಾಜು ಹಾಗುವ ಪೈಪ್ ಲೈನ್
ಗ್ರಾಮದ ಮನೆಗಳ ಮುಂದೆ ಹಾದು ಹೋಗಿದೆ ಆದರೆ ಪ್ರಾಯೋಗಿಕವಾಗಿ ಬಿಡುವ ನೀರಿನ ಪೈಪ್ ಲೈನ್ ಒಡೆದು ಗ್ರಾಮದ ಸುಮಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಇನ್ನೂ ಬಡ ಕೂಲಿ ಕಾರ್ಮಿಕರ ಮನೆಗಳು ಸಂಪೂರ್ಣವಾಗಿ ನೀರಿನಿಂದ ಜಲಾವೃತವಾಗಿ ಮನೆಯ ಗೋಡೆಗಳು , ಗುಡಿಸಲುಗಳು ಬಿದ್ದು ತಳಪಾಯ ಕುಸುಯುತ್ತಿದೆ.
ಇನ್ನೂ ಸ್ಥಳದಲ್ಲಿ ಇದ್ದ ಅಧಿಕಾರಿಗಳು ಮಾತ್ರ ಉಡಾಫೆಯಿಂದ ಏನು ಹಾಗಿಲ್ಲಂತೆ ವರ್ತಿಸುತ್ತಿದ್ದಾರೆ. ಇದರಿಂದ ವಯಸ್ಸಾದ ವಯೋವೃದ್ದರು ಮನೆಗಳು ಗೋಡೆಗಳು ಕುಸಿದು ಬಿದ್ದಿವೆ,
ಕಳಪೆ ಗುಣಮಟ್ಟದ ಪೈಪ್ ಅಳವಡಿಸಿದ್ದರಿಂದ ಪ್ರಾಯೋಗಿಕ ಹಂತದಲ್ಲಿ ಪೈಪ್ ಒಡೆದು ಹೋಗಿರುವುದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಇನ್ನೂ
ನೀರಿನಿಂದ ಜಲಾವೃತಗೊಂಡ ಮನೆಗಳಿಗೆ ನಷ್ಟ ಪರಿಹಾರ ನೀಡಬೇಕು,
ಕುಸಿದ ಗೋಡೆಗಳ ಮರು ನಿರ್ಮಿಸಿಕೊಳ್ಳಲು ನಷ್ಟ ಪರಿಹಾರ ಅವಶ್ಯಕ ಎಂದು ಕಟ್ಟಡ ಕುಸಿದ ಮನೆ ಮಾಲೀಕರಾದ ಮಲ್ಲಕ್ಕ , ಹಾಗೂ ಇತರರು ನಷ್ಟ ಪರಿಹಾರಕ್ಕೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಕೂಡಲೇ ಮನೆ ಕುಸಿದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾದ ಮಾಲೀಕರಿಗೆ ನಷ್ಟ ಪರಿಹಾರ ನೀಡಲು ಅಧಿಕಾರಿಗಳೊಂದಿಗೆ ಸೂಚಿಸುವೆ ಎಂದು ಕುಡಿಯುವ ನೀರಿನ ಯೋಜನೆಯ ಎಇಇ ದಯಾನಂದಸ್ವಾಮಿ ಮಾಧ್ಯಮದೊಟ್ಟಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

