ಚಳ್ಳಕೆರೆ : ಮೈನಿಂಗ್ ಅದಿರು ಸಾಗಣೆ ಡಂಪಿಂಗ್ ಯಾರ್ಡ್ ಸ್ಥಳಾಂತರ ಮಾಡಬೇಕು ಎಂದು ಬಿಜೆಪಿ ಪಕ್ಷದಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಹೇಳಿದರು
ನಗರದ ಪಾವಗಡ ರಸ್ತೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತದ ಜಿಲ್ಲಾ ಉಪವಿಭಾಗ ಅಧಿಕಾರಿ ಮಹಬೂಬು ಜಿಲಾನಿ ಖುರೇಸಿ ಹಾಗೂ ತಹಶಿಲ್ದಾರ್ ರೇಹಾನ್ ಪಾಷ ಅಧಿಕಾರಿಗಳ ತಂಡ ಧರಣಿ ನಿತರರನ್ನು ಮನವೊಲಿಸಿ ಧರಣಿ ಹಿಂಪಡೆದಿದ್ದಾರೆ.
ಇನ್ನೂ ನಗರದಲ್ಲಿ ಮೈನಿಂಗ್ ಡಂಪಿಂಗ್ ಯಾರ್ಡ್ ನಿಂದ ಮನುಷ್ಯನ ಆರೋಗ್ಯದ ಮೇಲೆ ಮೈನಿಂಗ್ ದೂಳು ಸೇರಿ ದುಷ್ಪರಿಣಾಮ ಉಂಟಾಗುತ್ತದೆ ಇದರಿಂದ ಶಾಲಾ ಮಕ್ಕಳಿಗೆ, ವಯೋವೃದ್ದರಿಗೆ ತೊಂದರೆಯಾಗುತ್ತದೆ ಎಂಬುದು ಮನಗೊಂಡು ಮೈನಿಂಗ್ ಯಾರ್ಡ್ ಸ್ಥಳಾಂತರ ಮಾಡಬೇಕು ಎಂದು ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದೆವೆ ಆ.8ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಹಾಗೂ ಹೋರಾಟಗಾರರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮೈನಿಂಗ್ ಡಂಪಿಂಗ್ ಯಾರ್ಡ್ ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅಧಿಕಾರಿಗಳ ತಂಡ ಚರನೆ ಮಾಡಿ ವರದಿ ಬಂದ ಮೇಲೆ ಡಂಪಿಂಗ್ ಯಾರ್ಡ್ ಸ್ಥಳಾಂತರ ಮಾಡಲು ನಿರ್ಮಾನ ಕೈಗೊಳ್ಳಾಗುತ್ತದೆ ಅಲ್ಲಿಯವರೆಗೆ ಮೈನಿಂಗ್ ಲಾರಿ ಓಡಾಟ ನಿಲ್ಲಿಸಲಾಗುತ್ತದೆ, ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ, ಅಲ್ಲಿಯವರೆಗೆ ಅಹೋರಾತ್ರಿ ಧರಣಿ ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಕೆಟಿ.ಕುಮಾರಸ್ವಾಮಿ ಹೇಳಿದರು.
ಇದೇ ಸಂಧರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್, ಪಿಎಸ್ಐ ಶಿವರಾಜ್, ಇತರೆ ಸಿಬ್ಬಂದಿ ವರ್ಗ,
ನಿಕಟ ಪೂರ್ವ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ , ಜಯಪಾಲಯ್ಯ, ಸೋಮಶೇಖರ್ ಮಂಡಿಮಠ, ಮಾತನಾಡಿದರು, ತಾಲ್ಲೂಕು ಮಂಡಲ ಅಧ್ಯಕ್ಷ ಸುರೇಶ್, ರಾಮದಾಸ್, ಯುವಮೋರ್ಚ ಉಪಾಧ್ಯಕ್ಷ ಲಕ್ಷ್ಮಣ್,
ಈಶ್ವರ ನಾಯಕ, ತಿಪ್ಪೇಸ್ವಾಮಿ, ಜಗದಾಂಭ, ತಿಪ್ಪೇಸ್ವಾಮಿ, ಹೊಟ್ಟೆಪನಹಳ್ಳಿ ಕಾಂತರಾಜ್, ಇನ್ನೂ ಹಲವು ಧರಣಿಯಲ್ಲಿ ಭಾಗಿಯಾಗಿದ್ದರು .
ಹೇಳಿಕೆ : ಜಿಲ್ಲಾಡಳಿತದ ಮೇಲೆ ನಂಬಿಕೆ ಇದೆ, ಮೈನಿಂಗ್ ಯಾರ್ಡ್ ಸ್ಥಳಾಂತರ ಮಾಡುತ್ತಾರೆ ಎನ್ನುವುದು ಕೇವಲ ಬಿಜೆಪಿ ಪಕ್ಷದ್ದು ಅಲ್ಲ ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ಧರಣಿ ಮಾಡುತ್ತಿದ್ದಿವೆ, ತಾತ್ಕಾಲಿಕವಾಗಿ ಅಹೋರಾತ್ರಿ ಧರಣಿ ಹಿಂಪಡೆಯುತ್ತಿದ್ದೆವೆ..-
–ಸೂರನಹಳ್ಳಿ ಶ್ರೀನಿವಾಸ್ ನಿಕಟ ಪೂರ್ವ ಮಂಡಲ ಅಧ್ಯಕ್ಷ ಚಳ್ಳಕೆರೆ
ಹೇಳಿಕೆ : ಮೈನಿಂಗ್ ಡಂಪಿಂಗ್ ಯಾರ್ಡ್ ನಿಂದ ಆಗುವ ಆನಾವುತಗಳ ಬಗ್ಗೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ವರದಿ ಬಂದ ನಂತರ ಡಂಪಿಂಗ್ ಯಾರ್ಡ್ ಸ್ಥಳಾಂತರಕ್ಕೆ ಕ್ರಮಗೊಳ್ಳಲಾಗುವುದು ಇಂದಿನಿಂದ ಮೈನಿಂಗ್ ಸರಬರಾಜು ಮಾಡುವ ಲಾರಿಗಳನ್ನು ನಿಲ್ಲಿಸಲಾಗಿದೆ, ಧರಣಿಯನ್ನು ಹಿಂಪಡೆಯುವಂತೆ ಹೇಳಿದ್ದೆವೆ —-
ಮಾಹಬೂಬ್ ಜಿಲಾನಿ ಖುರೇಷಿ
ಜಿಲ್ಲಾ ಉಪವಿಭಾಗ ಅಧಿಕಾರಿ ಚಿತ್ರದುರ್ಗ.


