“ಉಪನಿಷತ್ತುಗಳು ಪ್ರತಿಪಾದಿಸುವ ವಿಚಾರಗಳು ಸದಾ ಪ್ರಸ್ತುತ”:-ಪೂಜ್ಯ ವೈ ರಾಜಾರಾಮ್ ಗುರುಗಳು ಅಭಿಮತ.
ಚಳ್ಳಕೆರೆ:- ಉಪನಿಷತ್ತುಗಳು ಪ್ರತಿಪಾದಿಸುವ ವಿಚಾರಗಳು ಸದಾ ಪ್ರಸ್ತುತ ಎಂದು ಚಳ್ಳಕೆರೆಯ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಅಭಿಪ್ರಾಯಪಟ್ಟರು.
ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ “ಈಶಾವಾಸ್ಯ ಉಪನಿಷತ್” ಎಂಬ ವಿಷಯದ ಕುರಿತಾಗಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ಈ ಜಗತ್ತು ಪೂರ್ಣ,ಈ ಜಗತ್ತಿನಿಂದ ಬಂದ ನಮ್ಮ ಶರೀರವು ಪೂರ್ಣ, ಆದ್ದರಿಂದ ಪಂಚಭೂತಾತ್ಮಕವಾದ ಜಗತ್ತಿನ ಸೃಷ್ಟಿಯನ್ನು ನೋಡಿದರೆ ನಮಗೆ ಆಶ್ಚರ್ಯ ಉಂಟಾಗುತ್ತದೆ ಎಂದು ತಿಳಿಸಿದರು.
ಉಪನಿಷತ್ತುಗಳು ಬದುಕಿನ ನಿಜಸಂಗತಿಗಳನ್ನು ಬಯಲು ಮಾಡುತ್ತವೆ, ಹೀಗಾಗಿ ಅವುಗಳ ನಿತ್ಯ ಅಧ್ಯಯನ ಮತ್ತು ಅನುಸಂಧಾನ ಅಗತ್ಯ ಎಂದು ಪ್ರತಿಪಾದಿಸಿದರು. ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ,ಆರತಿ ನಡೆಯಿತು.
ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ, ಸದ್ಭಕ್ತರಾದ ವಸಂತಕುಮಾರಿ, ಶ್ರೀಮತಿ ವನಜಾಕ್ಷಿ ಮೋಹನ್, ಗೀತಾ ನಾಗರಾಜ್, ಯಶೋಧಾ ಪ್ರಕಾಶ್, ನಾಗರತ್ನಮ್ಮ, ಗಂಗಾಂಬಿಕೆ ರವಿ, ಗೀತಾ ವೆಂಕಟೇಶ್ ರೆಡ್ಡಿ, ಯತೀಶ್ ಎಂ ಸಿದ್ದಾಪುರ, ಸಂತೋಷ್, ಚೆನ್ನಕೇಶವ, ಡಾ.ಭೂಮಿಕ, ಚೇತನ್, ಸರಸ್ವತಮ್ಮ ಗೋವಿಂದರಾಜ್, ಗೀತಾ ಭಕ್ತವತ್ಸಲ, ಎಸ್. ಎಂ. ಗೀತಾ, ವಿಜಯಲಕ್ಷ್ಮೀ, ಸುಮನ ಕೋಟೇಶ್ವರ, ಕಾವೇರಿ ಸೇರಿದಂತೆ ಶ್ರೀಶಾರದಾಶ್ರಮ ಮತ್ತು ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

