ಚಳ್ಳಕೆರೆ: ಅಕ್ರಮ ಗಣಿಗಾರಿಕೆ ಮಾಡೋರ ವಿರುದ್ಧ
ಕ್ರಮ ಜರುಗಿಸಿ
ಚಳ್ಳಕೆರೆ ಗ್ರಾಮದ ಸರ್ವೆ ನಂ: 260ರಲ್ಲಿರುವ ಬಂಡೆಯನ್ನು
ಅಕ್ರಮವಾಗಿ ಗಣಿಗಾರಿಕೆ ಅಥವಾ ಬ್ಲಾಸ್ಟ ಮಾಡುತ್ತಿರುವವರ
ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಭಾರತ
ಹಿಂದೂ ಮಹಾಸಭಾದ ತಾಲೂಕು ಅಧ್ಯಕ್ಷೆ ಗೀತಾ ಗೋವಿಂದ
ರಾಜು ಒತ್ತಾಯಿಸಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ
ಮಾತನಾಡಿದ ಅವರು, ಗಣಿಗಾರಿಕೆ ಮತ್ತು ಬ್ಲಾಸ್ಟನಿಂದ ಶಾಲಾ
ಮಕ್ಕಳಿಗೆ ಹಾಗೂ ಸಾರ್ವಜನಿಕರ ಜಮೀನಿಗೆ ಹೋಗುವ ರಸ್ತೆಯಲ್ಲಿ
ಓಡಾಡುವ ಜನ-ಜಾನುವಾರುಗಳಿಗೆ ತೊಂದರೆಯಾಗುತ್ತಿದೆ ಎಂದು
ತಿಳಿಸಿದರು.

