ಚಿತ್ರದುರ್ಗ: ಗುಡ್ಡದಲ್ಲಿ ಅಂಗನವಾಡಿ ಆತಂಕದಲ್ಲಿ
ಗರ್ಭಿಣಿಯರು ಮಕ್ಕಳು
ಚಿತ್ರದುರ್ಗದ ಬಸವನಗುಡಿ ಅಂಗನವಾಡಿ ಕೇಂದ್ರವು ಗುಡ್ಡದ
ಪ್ರದೇಶದಲ್ಲಿರುವುದರಿಂದ ಮಕ್ಕಳು ಮತ್ತು ಗರ್ಭಿಣಿಯರು ಪ್ರತಿದಿನ
ಓಡಾಡಲು ತೊಂದರೆ ಎದುರಿಸುತ್ತಿದ್ದಾರೆ. ರಸ್ತೆ ಸರಿಯಿಲ್ಲ, ಸ್ವಚ್ಛತೆ
ಇಲ್ಲ, ಚರಂಡಿ ಹಾಳಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದು,
ಮಕ್ಕಳು ಅಂಗನವಾಡಿಗೆ ಹೋಗಿ ಬರುವವರೆಗೆ ಪೋಷಕರು
ಆತಂಕದಲ್ಲಿದ್ದಾರೆ. ಈ ಅವ್ಯವಸ್ಥೆಯಿಂದಾಗಿ ಅಂಗನವಾಡಿಗೆ
ತೆರಳುವವರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

